ಶೇ.90 ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಒತ್ತುವರಿ

zamir
Published on

ಕಲಬುರಗಿ: ಕಲಬುರಗಿ, ವಿಜಯಪುರ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್ ಪಡೆಯುವುದಾಗಿ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಸಿಎಂ ಆದೇಶದಂತೆ ರೈತರಿಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಶುರುವಾಗಲಿದೆ. ರೈತರ ಜಮೀನನ್ನು ಯಾರೂ ಸ್ವಾಧೀನಕ್ಕೆ ತೆಗೆದುಕೊಳ್ಳಲು ಆಗಲ್ಲ. ಕಾನೂನಿನಲ್ಲಿ ಅವಕಾಶವೂ ಇಲ್ಲ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಯಾವ ಕಾರಣಕ್ಕೂ ಸರ್ಕಾರ ರೈತರ ಜಮೀನನ್ನು ತೆಗೆದುಕೊಳ್ಳಲ್ಲ, ಯಾರನ್ನು ಒಕ್ಕಲೆಬ್ಬಿಸಲ್ಲ. ಅವರು ನಮ್ಮ ಅನ್ನದಾತರು. ಅವರ ಜಮೀನು ತೆಗೆದುಕೊಳ್ಳೋಕೆ ಆಗುತ್ತಾ ಎಂದು ಪ್ರಶ್ನಿಸಿದ ಅವರು, ರಾಜ್ಯದ ಒಂಬತ್ತು ಕಡೆ ವಕ್ಫ್ ಬೋರ್ಡ್ ಆಸ್ತಿಯನ್ನು ಶೇ.೯೦ ಮುಸ್ಲಿಮರೇ ಕಬಳಿಸಿದ್ದರೆ, ಶೇ.೧೦ ಹಿಂದುಗಳಿದ್ದಾರೆ. ಒತ್ತುವರಿ ಮಾಡಿಕೊಂಡವರಿAದ ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿಯವರಿಂದ ನನಗೆ ಪುಕ್ಕಟೆ ಪ್ರಚಾರ: ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಹೋರಾಟ, ಪ್ರತಿಭಟನೆ ಕೈಗೆತ್ತಿಕೊಂಡು ಹೇಳಿಕೆ ನೀಡುವ ಮೂಲಕ ನನಗೆ ಪುಕ್ಕಟೆ ಪ್ರಚಾರ ನೀಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಜಮೀರ್ ಅಹ್ಮದ್ ಯಾರು ಎಂದು ತೋರಿಸುವಂತೆ ಮಾಡಿದ್ದಾರೆ ಎಂದು ಸಚಿವ ಖಾನ್ ಹೇಳಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿಡಿಯೋ ತೋರಿಸಿ ಅಲ್ಲಾನ ಆಸ್ತಿ ಒತ್ತುವರಿಗೆ ಬಿಡಬಾರದು ಎಂದಿದ್ದರು. ಈಗ ಮಾತು ಬದಲಿಸಿದ್ದಾರೆ. ಇಂಥವರಿಗೆ ಏನು ಮಾಡಬೇಕು? ಬೊಮ್ಮಾಯಿ ಇತರ ಬಿಜೆಪಿಯವರು ಸಿಎಂ ಆಗಿದ್ದಾಗ ವಕ್ಫ್ ಸಭೆ ನಡೆಸಿಲ್ಲವೇನು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಉಪ ಚುನಾವಣೆ, ಮಹಾರಾಷ್ಟç ಸಾರ್ವತ್ರಿಕ ಚುನಾವಣೆ ಕಾರಣಕ್ಕಾಗಿ ಬಿಜೆಪಿ ವಕ್ಫ್ ವಿಷಯ ಪ್ರಸ್ತಾಪಿಸಿ ರಾಜಕೀಯ ಮಾಡುತ್ತಿದೆ. ವಕ್ಫ್ ಇವತ್ತಿನದ್ದಲ್ಲ, ಸ್ವಾತಂತ್ರÈಪೂರ್ವದಿAದಲೂ ಇದೆ. ದಾನಿಗಳು ಕೊಟ್ಟಿರುವ ಜಮೀನಿದು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದರಿಂದ ಇಷ್ಟೆಲ್ಲ ರಾಜಕೀಯ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net