

ಯಾದಗಿರಿ: ಸಾರ್ವಜನಿಕ ರಂಗದಲ್ಲಿ ಸಹಕಾರಿ ಬ್ಯಾಂಕ್ಗಳು ಹಲವು ದಶಕಗಳಿಂದ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ರೈತಾಪಿ ವರ್ಗದ ಆಥರ್ಿಕ ಸಬಲತೆಗೆ ತಮ್ಮದೆಯಾದ ಕೊಡುಗೆ ನೀಡುತ್ತಿವೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ತಿಳಿಸಿದರು.
ಸೋಮವಾರ ನಗರದ ಬ್ಯಾಂಕ್ ಆವರಣದಲ್ಲಿ ಆಯೋಜಿಸಿದ್ದ 65ನೇ ವಾಷರ್ಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿ, 1956ರಲ್ಲಿ ನಮ್ಮ ಬ್ಯಾಂಕ್ ಕಲಬುರಗಿ ವಿಭಾಗದಲ್ಲೇ ಮೊದಲ ಬಾರಿಗೆ ಸ್ಥಾಪನೆಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 67 ವರ್ಷಗಳಿಂದ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿಕಾಡರ್್ ಬ್ಯಾಂಕ್ನಿಂದ ಹಲವು ಪ್ರಶಸ್ತಿ ಸಹ ಪಡೆದುಕೊಂಡಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನವರೆಗೆ ಒಟ್ಟು 9048 ಸದಸ್ಯರನ್ನು ಬ್ಯಾಂಕ್ ಒಳಗೊಂಡಿದೆ. 78.17 ಲಕ್ಷ ಶೇರು ಬಂಡವಾಳವಿದ್ದು, 5200 ಸಾಲಗಾರ ಸದಸ್ಯರಾಗಿರಿದ್ದಾರೆ. ದೀಘರ್ಾವ ಯೋಜನೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಸಾಲದ ಹಂಚಿಕೆ ಮಾಡಲಾಗಿದೆ. ಸಧ್ಯ 349.67 ಲಕ್ಷಗಳ ಹೊರಬಾಕಿ ಇದೆ. ಕಳೆದ ಹಲವು ವರ್ಷಗಳಲ್ಲಿ ಪ್ರಕೃತಿ ವಿಕೋಪದಂಥ ಕಾರಣಗಳಿಗಾಗಿ ಕುಂಠಿತವಾಗಿದ್ದರೂ ಇತ್ತೀಚಿಗೆ ಹಲವು ಬಡ್ಡಿ ರಿಯಾಯಿತಿಗಳಿಂದ ಶೇ.78.95ರ ವಸೂಲಾತಿ ಸಾಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ರಾಮಣ್ಣ ಬಳಿಚಕ್ರ, ಆರ್.ಮಹಾದೇವಪ್ಪ, ದಶರಥರಾಮರಡ್ಡಿ, ಸೋಮಶೇಖರ ಮಸ್ಕನಳ್ಳಿ, ಶರಣಪ್ಪ ಕೊಂಕಲ್, ಜಂಬಲಮ್ಮ, ಮರೆಮ್ಮ, ಬಾಲರಡ್ಡಿಗೌಡ, ಶ್ರೀಧರಕುಮಾರ, ಕಲಬುರಗಿ ವಿಭಾಗದ ವ್ಯವಸ್ಥಾಪಕ ಅಜಯ್ ಪಾಟೀಲ್, ಸಿಬ್ಬಂದಿ ಶರಣಭೂಪಾಲ ಬಾನಾ, ಕಲ್ಪನಾ ಇದ್ದರು.