ಶೇ 4ರ ಮೀಸಲು ಮರುಜಾರಿ ಅಗತ್ಯವಿದೆ

ANJANEYA H ex minister
Published on

ಚಿತ್ರದುರ್ಗ: ಸ್ವಾತಂತ್ರ್ಯ ಹಿಂದು-ಮುಸ್ಲಿಮರ ಹೋರಾಟದ ಫಲವಾಗಿ ಲಭಿಸಿದ್ದು, ಆದ್ದರಿಂದ ಅಲ್ಪಸಂಖ್ಯಾತರಿಗೂ ಮೀಸಲಾತಿ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ವಕ್ಫ್‌ ಮಂಡಳಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಅನ್ವರ್ ಬಾಷಾ ಅವರಿಗೆ ಜಿಲ್ಲಾ ವಕ್ಫ್‌ ಮಂಡಳಿಯಿಂದ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಹಿಂದಿನಂತೆ ಶೇ 4ರಷ್ಟು ಮೀಸಲಾತಿ ಪುನಃ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಶ್ರಮಿಸಲಿದೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಸತಿ ಸೌಲಭ್ಯ ಕಲ್ಪಿಸಿ ಎಂದು ವಸತಿ ಸಚಿವರಿಗೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net