ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳ ಕಳವು

Cow
Published on

ಹಾಸನ : ತಾಲೂಕು, ದುದ್ದ ಹೋಬಳಿಯ ಚಿಕ್ಕಕಡಲೂರು ಗ್ರಾಮದ ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ಎಚ್‌ಎಫ್ ತಳಿಯ ಎರಡು ಹಸುಗಳನ್ನು ಕಳ್ಳರು ಶನಿವಾರ ಮಧ್ಯರಾತ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ.

ಗ್ರಾಮದ ವಾಸಿಯಾದ ಮಂಜೇಗೌಡ ಎಂಬುವವರು ಎಚ್‌ಎಫ್ ತಳಿಯ ಹಸುಗಳನ್ನು ಸಾಕಿಕೊಂಡು ಜೀವನೋಪಾಯ ಮಾಡಿಕೊಂಡಿದ್ದರು. ಶನಿವಾರ ಸಂಜೆ ಎಂದಿನಂತೆ ಹಾಲು ಕರೆದು ಹಸುಗಳನ್ನು ಶೆಡ್‌ನಲ್ಲಿ ಕಟ್ಟಿಹಾಕಿ, ಶೆಡ್‌ನ ಬೀಗ ಹಾಕಿದ್ದರು. ಭಾನುವಾರ ಬೆಳಗ್ಗೆ ಸುಮಾರು 5.45ರ ಸಮಯದಲ್ಲಿ ಹಾಲು ಕರೆಯಲು ಹೋದಾಗ ಶೆಡ್‌ಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಕಟ್ಟಿದ್ದ 2 ಹಸುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ. ಎರಡು ಹಸುಗಳ ಬೆಲೆ ಅಂದಾಜು 1,35,000 ರೂ. ಗಳಾಗಿದ್ದು, ಹಸುಗಳನ್ನು ಪತ್ತೆ ಮಾಡಿಕೊಡಬೇಕು ಎಂದು ಮಂಜೇಗೌಡ ಅವರು ದುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net