ಶೆಟ್ಟರ್ ಬಿಜೆಪಿ ಹೋಗಿದ್ದರಿಂದ ಕಾಂಗ್ರೆಸ್ ಹಾನಿಯಾಗದು

YADGIRI 01
Published on

ಯಾದಗಿರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯವರು ಉಪಯೋಗಿಸಿ ತಿಪ್ಪೆಗೆ ಬಿಸಾಕಿದ್ದರು. ನಾವು ಕರೆದುಕೊಂಡು ಬಂದು ಟಿಕೆಟ್ ಕೊಟ್ಟು ನಂತರ ಎಂಎಲ್ಸಿ ಮಾಡಿದರೂ ಅವರು ಪಕ್ಷ ಬಿಟ್ಟಿದ್ದು ವಿಚಿತ್ರವೆನಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.


ಶೆಟ್ಟರ್ ಬಿಜೆಪಿ ಹೋಗಿದ್ದರಿಂದ ಕಾಂಗ್ರೆಸ್ಗೆ ಯಾವ ಹಾನಿಯೂ ಆಗಿಲ್ಲ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಬಹಳಷ್ಟು ಜನರಿಗೆ ಈಡಿ,ಐಟಿ ಸಂಸ್ಥೆಗಳ ಮೂಲಕ ಬಿಜೆಪಿಯವರು ಹೆದರಿಸಿದ್ದಾರೆ. ರಮೇಶ ಜಾರಕಿಹೊಳಿ ಡಿಎಸ್ಎಸ್ ಬ್ಯಾಂಕ್ನಿಂದ 700 ಕೋಟಿಗೂ ಅಧಿಕ ಕೊಟಿ ಲೂಟಿ ಮಾಡಿದ್ದಾರೆ. ಅವರಿಗೆ ಯಾವುದೇ ಐಟಿ, ಈಡಿ ಯಾವುದೇ ತನಿಖೆ ಇಲ್ಲ ಎಂದರು.

ಸವದಿ ಅವರಿಗೆ ಬಿಜೆಪಿ ಸ್ನೇಹಿತರು ಮಾತಾಡಿದ್ದಾರೆ ಅಂತ ಹೇಳಿದ್ದಾರೆ. ಆದರೆ ಅವರು ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಭೇಟಿಗೆ ಸಮಯ ಕೊಡುತ್ತಿಲ್ಲ. ಹಾಗಾಗಿ ಅವರು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಬಳಿ ಹೋಗಿ ಚಚರ್ೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸಕರ್ಾರದ ಕಾರ್ಯವೈಖರಿಗೆ ಕೇಂದ್ರ ಬಿಜೆಪಿ ನಾಯಕರಲ್ಲಿ ಭಯ ಶುರುವಾಗಿದೆ ಎಂದು ಲೇವಡಿ ಮಾಡಿದರು.

ಸಚಿವ ಸತೀಶ ಜಾರಕಿಹೊಳಿ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನ ಭೇಟಿ ಮಾಡಿದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಅವರ ಇಲಾಖೆ ಕೆಲಸಗಳ ಬಗ್ಗೆ ಮತ್ತು ಹೆಚ್ಚಿನ ಅನುದಾನ ನೀಡುವ ಬಗ್ಗೆ ಭೇಟಿಯಾಗಿದ್ದಾರೆ ಎಷ್ಟೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net