ಶೆಟ್ಟರಮಠದ ಧಾರ್ಮಿಕ ಸೇವೆ ಅಪಾರ

27-2
ಅಥಣಿ ಶೆಟ್ಟರಮಠದಲ್ಲಿ ಎಸ್‌ಪಿ ಡಾ.ಸಂಜೀವ ಪಾಟೀಲ ಅವರನ್ನು ಸತ್ಕರಿಸಲಾಯಿತು. ಮರುಳಸಿದ್ದ ಸ್ವಾಮೀಜಿ, ಡಾ.ಎಂ.ಜಿ.ಹಂಜಿ, ಡಿವೈಎಸ್‌ಪಿ ಶ್ರೀಪಾದ ಜಲ್ದೆ ಇದ್ದರು.
Published on

ಅಥಣಿ, ಬೆಳಗಾವಿ: ಐತಿಹಾಸಿಕ ಪರಂಪರೆ ಹೊಂದಿರುವ ಶೆಟ್ಟರಮಠವು ಸಮಾಜಮುಖಿ ಮತ್ತು ಧಾರ್ಮಿಕ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹೇಳಿದರು.

ಪಟ್ಟಣದ ಶೆಟ್ಟರಮಠದ ಲಿಂ.ಮರುಳಸಿದ್ದ ಶಿವಯೋಗಿಗಳ 130ನೇ ಪುಣ್ಯಸ್ಮರಣೋತ್ಸವದಲ್ಲಿ ಸೋಮವಾರ ಮಾತನಾಡಿದ ಅವರು, ನಮ್ಮ ನಾಡಿನ ಮಠ, ಮಾನ್ಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ವಿದ್ಯಾದಾನ, ಅನ್ನದಾನ, ಆಶ್ರಯ ತಾಣಗಳಾಗಿ ಸಮಸ್ತ ಭಕ್ತ ಸಂಕುಲಕ್ಕೆ ವರವಾಗಿವೆ. ಅಥಣಿ ಪುಣ್ಯದ ಆಲಯವಾಗಿದ್ದು, ಮುರುಘೇಂದ್ರ ಶಿವಯೋಗಿಗಳ ತಪೋಭೂಮಿ ನಾಡಿಗೆ ಪ್ರಸಿದ್ಧಿಯಾಗಿದೆ ಎಂದರು.

ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಂ.ಜಿ.ಹಂಜಿ ಮಾತನಾಡಿ, ಶೆಟ್ಟರಮಠದ ಲಿಂ.ಮರುಳಸಿದ್ದ ಶಿವಯೋಗಿಗಳ ಬದುಕೇ ಒಂದು ಪವಾಡವಾಗಿದೆ ಎಂದರು. ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಲಿಂ.ಮರುಳಸಿದ್ದ ಶಿವಯೋಗಿಗಳು ಈ ಮಠದ ಮೂಲಪುರುಷರು. ಅವರು ನಡೆದಾಡಿದ ಈ ಪುಣ್ಯನೆಲ ಇಂದು ಅತ್ಯಂತ ಜಾಗೃತ ತಾಣವಾಗಿದೆ ಎಂದರು. ಶ್ರೀಮಠದಿಂದ ಎಸ್.ಪಿ.ಡಾ.ಸಂಜೀವ ಪಾಟೀಲ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶಿವಶಂಕರ ಮುಕರಿ, ಡಾ.ಎಂ.ಜಿ.ಹಂಜಿ ಅವರನ್ನು ಸತ್ಕರಿಸಲಾಯಿತು. ಪ್ರಕಾಶ ಮಹಾಜನ, ಸುರೇಶ ಗೋಟಖಿಂಡಿ, ಅಪ್ಪಾಸಾಬ ತೊದಲಬಾಗಿ, ಸಂಗಪ್ಪ ಉಣ್ಣಿ, ಪ್ರಕಾಶ ಮೆನಸಿ, ಜಗದೀಶ ಹಿರೇಮಠ, ಈರಯ್ಯ ಜಗದಾಳಮಠ, ಶಿವಕುಮಾರ ತೆಲಸಂಗ, ಮುರುಗೇಶ ಅಳಿಮಟ್ಟಿ, ಪುಟ್ಟು ಹಿರೇಮಠ, ವಿರೂಪಾಕ್ಷ ಗೊಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net