ಶೃಂಗೇರಿ ಜಗದ್ಗುರುಗಳಿಗೆ ಶೃಂಗೇರಿ ರತ್ನ ಸಂಪುಟ-5 ಸಮರ್ಪಣೆ

28sri-1.jpg web
Published on

ಶೃಂಗೇರಿ: ಪ್ರಸಿದ್ಧ ವಿದ್ವಾಂಸ ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿಗಳು ರಚಿಸಿದ ಶೃಂಗೇರಿ ರತ್ನ ಸಂಪುಟ-5 ಗ್ರಂಥವನ್ನು ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗೆ ಸಮರ್ಪಿಸಲಾಯಿತು. ಭಾನುವಾರ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರá-ಗಳನ್ನು ಭೇಟಿ ಮಾಡಿದ ಲಕ್ಷ್ಮೀನರಸಿಂಹಶಾಸ್ತ್ರಿಗಳು, ಗ್ರಂಥ ಸಮರ್ಪಿಸಿ ಫಲ, ಮಂತ್ರಾಕ್ಷತೆ, ಆಶೀರ್ವಾದ ಪಡೆದರು.

ಲಕ್ಷ್ಮೀನರಸಿಂಹಶಾಸ್ತ್ರಿ ರಚಿಸಿರುವ ಐದು ಸಂಪುಟಗಳಲ್ಲಿ ಶೃಂಗೇರಿ ಶಾರದಾ ಪೀಠದ ಇತಿಹಾಸ ಹಾಗೂ ದಾಖಲೆಗಳಿವೆ. ಇದು ಅತ್ಯಂತ ಶ್ರೇಷ್ಠ ಗ್ರಂಥ. ಈ ಹಿಂದೆಯೂ ಶೃಂಗೇರಿ ಶ್ರೀಪೀಠ ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಈ ಎಲ್ಲ ಗ್ರಂಥಗಳು ಉತ್ತಮ ಮಾಹಿತಿ ಒಳಗೊಂಡಿದೆ ಎಂದು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹೇಳಿದರು.

ಶೃಂಗೇರಿ ರತ್ನ ಸಂಪುಟ -5 ರಲ್ಲಿ ಶ್ರೀ ಶಾರದಾಪೀಠದ ಇತಿಹಾಸ ವಿವರಿಸಲಾಗಿದೆ. ಶೃಂಗೇರಿ ಶ್ರೀ ಶಾರದಾಪೀಠ, ಶ್ರೀ ಶಂಕರರ ಕುರಿತು ಬರೆದ ಧರೆಗಿಳಿದ ದಿವ್ಯ ತೇಜ, ವಿಜಯ ಸಾಮ್ರಾಜ್ಯ, ದಕ್ಷಿಣಾಮ್ನಾಯಾಪೀಠ ಹಾಗೂ ಶಾಖಾಮಠಗಳು, ಜಗದ್ಗುರುಗಳಾದ ಶ್ರೀ ಸುರೇಶ್ವರಾಚಾರ್ಯರು, ಶ್ರೀ ವಿದ್ಯಾಶಂಕರ, ಯುಗಪುರುಷ ಶ್ರೀ ವಿದ್ಯಾರಣ್ಯರು, ಶ್ರೀಚಂದ್ರಶೇಖರ ಭಾರತೀ, ಶ್ರೀ ಅಭಿನವ ವಿದ್ಯಾತೀರ್ಥರು, ಶ್ರೀ ಭಾರತೀತೀರ್ಥರ ಕುರಿತ ಮಹತ್ವದ ಮಾಹಿತಿಗಳು ಐದು ಸಂಪುಟಗಳಲ್ಲಿ ಅಡಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net