ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ

sri swamiji
(ಸಾಂರ್ಧಬಿಕ ಚಿತ್ರ)
Published on

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಹಾಗೂ ವ್ಯಾಸಪೂಜೆ ಗುರುನಿವಾಸದಲ್ಲಿ ಜು.10ರಂದು ನೆರವೇರಲಿದೆ.

ಈ ಬಾರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು 51ನೇ ವರ್ಷದ ಚಾತುರ್ಮಾಸ್ಯ ಕೈಗೊಳ್ಳಲಿದ್ದು ಸೆ.7ರಂದು ಚಾತುರ್ಮಾಸ್ಯ ಮುಕ್ತಾಯಗೊಳ್ಳಲಿದೆ. ಚಾತುರ್ಮಾಸ್ಯ ಸಂದರ್ಭ ಗುರುನಿವಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಜು.10ರಂದು ಯತಿವರ್ಯರಿಂದ ವ್ಯಾಸಪೂಜೆ ಹಾಗೂ ಚಾತುರ್ಮಾಸ್ಯ ವ್ರತ. 11ರಂದು ಉತ್ತರಾಪೂಜೆ, 28ಕ್ಕೆ ಶ್ರಾವಣ ಸೋಮವಾರ ಪೂಜೆ, ಆ.4ಕ್ಕೆ ಶ್ರಾವಣ ಸೋಮವಾರ ಪೂಜೆ, 8ಕ್ಕೆ ವರಲಕ್ಷ್ಮೀ ವ್ರತ, 11ಕ್ಕೆ ಶ್ರಾವಣ ಸೋಮವಾರ ಪೂಜೆ, 16ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ, 17ಕ್ಕೆ ನಾರಾಯಣೀಯ ಅರ್ಚನಾ, 18ಕ್ಕೆ ಶ್ರಾವಣ ಸೋಮವಾರ ಪೂಜೆ, 27ಕ್ಕೆ ಶ್ರೀ ವರಸಿದ್ಧಿ ವಿನಾಯಕ ವ್ರತ ಹಾಗೂ ಮಹಾಗಣಪತಿ ವ್ಯಾಕ್ಯಾರ್ಥ ಸಭೆ, ಸೆ.1ಕ್ಕೆ ಕೇದಾರೇಶ್ವರ ವ್ರತ, 3ಕ್ಕೆ ಏಕಾದಶಿ ಹಾಗೂ ವಾಮನ ಜಯಂತಿ ವ್ರತ, 6ಕ್ಕೆ ಶ್ರೀ ಅನಂತಪದ್ಮನಾಭ ವ್ರತ, 7ಕ್ಕೆ ಶ್ರೀ ಉಮಾಮಹೇಶ್ವರ ವ್ರತ ಹಾಗೂ ಚಾತುರ್ಮಾಸ್ಯ ಮುಕ್ತಾಯ. 8ರಂದು ಮಹಾಗಣಪತಿ ವ್ಯಾಕ್ಯಾರ್ಥ ಸಭೆ ಜರುಗಲಿದೆ.

ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ 33ನೇ ವರ್ಧಂತಿ ಮಹೋತ್ಸವ ಜ.29ರಂದು ಗುರುನಿವಾಸದಲ್ಲಿ ಜರುಗಲಿದೆ. 26ರಂದು ಮಹಾರುದ್ರ ಯಾಗಕ್ಕೆ ಸಂಕಲ್ಪ, 27ರ ಬೆಳಗ್ಗೆ ಕಾಲಭೈರವ ದೇವಾಲಯದಲ್ಲಿ ವಿಶೇಷ ಪೂಜೆ, 29ರ ಬೆಳಗ್ಗೆ 7 ಗಂಟೆಗೆ ಕಿರಿಯ ಶ್ರೀಗಳ ಆಹ್ನಿಕ ದರ್ಶನ, ಬೆಳಗ್ಗೆ 10 ಗಂಟೆಗೆ ಜಗದ್ಗುರುಗಳ ಅನುಗ್ರಹ ಭಾಷಣ, ಮಧ್ಯಾಹ್ನ 11 ಗಂಟೆಗೆ ಮಹಾರುದ್ರ ಯಾಗದ ಪೂರ್ಣಾಹುತಿ, ರಾತ್ರಿ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net