ಶೃಂಗೇರಿ ಜಗದ್ಗುರುಗಳ ಅವಹೇಳನ ಮಾಡಿದವಗೆ ಶಿಕ್ಷೆ

download (1).jpg web
Published on

ಶೃಂಗೇರಿ: ಶಾರದಾ ಪೀಠದ ಜಗದ್ಗುರುಗಳ ಕುರಿತು ಫೇಸ್​ಬುಕ್​ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಅಪರಾಧಿಗಳಿಗೆ ಇಲ್ಲಿನ ಜೆಎಂಎಫ್​ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಧಾರವಾಡದ ಮುನ್ನ್ನಾ ಹಜಾರ್ (28) ಎಂಬಾತ ಶಿಕ್ಷೆಗೆ ಗುರಿಯಾದವ. 2015ರ ನ.19ರಂದು ‘ಹಮಾರೆ ಗಾಂವ್ ಕಾ ಕುತ್ತಾ ಹೇತೂ’ ಎಂಬ ಬರಹವನ್ನು ಪೋಸ್ಟ್ ಮಾಡಿ ಹಿಂದು ಧರ್ಮಕ್ಕೆ ಅವಮಾನ ಮಾಡಿರುವ ಬಗ್ಗೆ ಐಪಿಸಿ ಸೆಕ್ಷನ್ 295/ಎ ಮತ್ತು ಐಪಿಸಿ 505 ಸೆಕ್ಷನ್​ನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. 16 ಸಾಕ್ಷಿದಾರರ ವಿಚಾರಣೆ, ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಅವರು ಅಪರಾಧಿಗೆ 3 ವರ್ಷದ 3 ತಿಂಗಳು ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲೆ ಹರಿಣಾಕ್ಷಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net