

ಕಲಬುರಗಿ: ಸನಾತನ ಧರ್ಮ ಪ್ರಚಾರಕ್ಕಾಗಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ತೀರ್ಥರು ಕೈಗೊಂಡಿರುವ ವಿಜಯಯಾತ್ರೆಯೂ ಭಾನುವಾರ ನಗರಕ್ಕೆ ಆಗಮಿಸಿದ್ದು, ಅದ್ದೂರಿ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.
ಬೆಳಗ್ಗೆ ಕೋಟನೂರ (ಡಿ) ಬಡಾವಣೆಯಲ್ಲಿ ಶ್ರೀ ವಿಧುಶೇಖರಭಾರತೀ ತೀರ್ಥರನ್ನು ನಗರಕ್ಕೆ ಶಾಸ್ತೊçÃಕ್ತವಾಗಿ ಸ್ವಾಗತಿಸಲಾಯಿತು. ಬಳಿಕ ಅಲ್ಲಿಂದ ಸಂಗಮೇಶ್ವರ ಕಾಲನಿ ಶ್ರೀ ಶಂಕರ ಮಠದವರೆಗೂ ಗುರುಗಳನ್ನು ನೂರಾರು ಯುವಕರಿಂದ ಅದ್ದೂರಿ ಬೈಕ್ ರ‍್ಯಾಲಿಯೊಂದಿಗೆ ಬರಮಾಡಿಕೊಂಡಿರು. ಬೈಕ್‌ಗಳಿಗೆ ಕಟ್ಟಿದ್ದ ಕೇಸರಿ ಧ್ವಜಗಳು ರಾರಾಜಿಸಿದವು. ಶ್ರೀ ಶಂಕರಾಚಾರ್ಯರಿಗೆ ಜಯವಾಗಲಿ.. ಶ್ರೀ ಭಾರತೀ ತೀರ್ಥರಿಗೆ ಜಯವಾಗಲಿ.. ಶ್ರೀ ವಿಧುಶೇಖರ ಭಾರತೀ ತೀರ್ಥರಿಗೆ ಜಯವಾಗಲಿ.. ಹರಹರ ಶಂಕರ.. ಶಂಕರA ರಕ್ಷಮಾಮ್ ಸೇರಿ ಇನ್ನಿತರ ಜೈಘೋಷ ಮೊಳಗಿದವು. ಶಂಕರ ಮಠದಲ್ಲಿ ಶ್ರೀಗಳಿಗೆ ಧೂಳಿ ಪಾದಪೂಜೆಯೊಂದಿಗೆ ಸ್ವಾಗತಿಸಲಾಯಿತು.
ಸಂಜೆ ೬.೩೦ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದ ತೀರ್ಥ ಸಭಾಗೃಹದವರೆಗೂ ವೈಭವದಿಂದ ಶೋಭಾಯಾತ್ರೆ ಜರುಗಿತು. ವಿವಿಧ ಪುಷ್ಪಗಳಿಂದ ಅಲಂಕಾರಗೊAಡ ತೆರೆದ ವಾಹನದಲ್ಲಿ ಜಗದ್ಗುರುಗಳು ವಿರಾಜಮಾನರಾಗಿದ್ದರು. ಜಿಲ್ಲೆಯ ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಗವಂತನ ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಯುವಕರು ವಿವಿಧ ಸಂತರ ಛದ್ಮವೇಶದೊಂದಿಗೆ ಕುದುರೆ ಮೇಲೆ ಕುಳಿತು ಗಮನಸೆಳೆದರು. ನಾಸಿಕ್ ಡೋಲು, ಉಡುಪಿಯ ಚಂಡಿ ಮೇಳಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು.
ದಾರಿಯುದ್ದಕ್ಕೂ ಅಸಂಖ್ಯಾತ ಜನರು ಜಗದ್ಗುರುಗಳಿಗೆ ಕೈಮುಗಿದು ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು. ಸತ್ಯಪ್ರಮೋಧ ತೀರ್ಥರ ಸಭಾಗೃಹದಲ್ಲಿ ಶ್ರೀ ವಿಧುಶೇಖರಭಾರತೀ ತೀರ್ಥರಿಗೆ ನಗರದ ಜನರ ಪರವಾಗಿ ಪೌರ ಸನ್ಮಾನ ಮಾಡಿ, ಭಿನ್ನವತ್ತಳಿಕೆ ನೀಡಿ ಆಶೀರ್ವಾದ ಪಡೆಯಲಾಯಿತು.
ಶಹಾಬಾದ್‌ನ ಶ್ರೀ ಶಂಕರರಾವ್ ಮಹಾರಾಜ, ಕಾಡ್ಲೂರಿನ ಶ್ರೀ ಸದಾಶಿವ ಮಹಾರಾಜ, ವೇ.ಮೂ. ಮೋಹನ ಭಟ್ಟ, ಪಂ.ಘAಟಿ ರಾಮಾಚಾರ್ಯ, ಪಿ.ಎಚ್.ಕುಲಕರ್ಣಿ, ಮಲ್ಹಾರರಾವ್ ಗಾರಂಪಳ್ಳಿ, ನಾರಾಯಣಾಚಾರ ಕಮಲಾಪುರ, ರಮಾನಂದ ಮೋಹರಿರ್, ರಾಘವೇಂದ್ರ ಕುಲಕರ್ಣಿ, ಶ್ರೀನಿವಾಸ ದೇಸಾಯಿ, ಗೋವಿಂದ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪಿ.ಆರ್.ಕುಲಕರ್ಣಿ, ಗೋಪಾಲಕೃಷ್ಣ ಸರಡಗಿ, ಅಮಿತ್ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಪ್ರೀತಮ್ ಪಾಟೀಲ್, ಋಷಿಕೇಶ ಚವಡಾಪುರಕರ್, ಅಮಿತ್ ಕುಲಕರ್ಣಿ, ಅಕ್ಷಯ್ ಮಾಶಾಳ, ಶ್ರೀಪಾದ ದೇಶಪಾಂಡೆ, ಅಜಿತ್ ಕುಮಾರ ಕೊಪ್ಪಳಕರ್, ವೇಣುಗೋಪಾಲ ಕುಲಕರ್ಣಿ, ಅಶ್ವಂತ ಮಾಡ್ಯಾಳಕರ್, ಅವಿನಾಶ ಪಾಟೀಲ್, ಮಂಜುನಾಥ ಕುಲಕರ್ಣಿ, ನಾಗೇಶ ಕುಲಕರ್ಣಿ, ಪ್ರಮೋದ ಕುಲಕರ್ಣಿ, ಆದಿತ್ಯಾ ಕುಲಕರ್ಣಿ ಇತರರಿದ್ದರು.