

ಚಿತ್ರದುರ್ಗ: ಶುಶ್ರೂಷಕರ ಹಸನ್ಮುಖತೆ ರೋಗಿಗಳಿಗೆ ಚೈತನ್ಯ ತುಂಬುತ್ತದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅಕ್ಕಮಹಾದೇವಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ 205ನೇ ಜನ್ಮ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿ,ಸದಾ ನಗು ಮುಖದಿಂದ ಶುಶ್ರೂಷಕರು ರೋಗಿಗಳಿಗೆ ಸೇವೆ ಸಲ್ಲಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ರಾಜೇಶ್ ಮಾತನಾಡಿ,ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಶುಶ್ರೂಷಕರ ಸೇ ವೆ ಮುಖ್ಯ.ಈ ನಿಮ್ಮ ಸೇವೆ ರೋಗಿಗಳ ಪ್ರಾಣ ಉಳಿಸುವಂತಹದ್ದಾಗಿದ್ದು,ಇಂತಹ ಸೇವೆಯನ್ನು ಯಾರು ಕಡೆಗಣಿಸಲಾಗದು. ಶುಶ್ರೂಷ ಕರ ಸೇವೆ ಅಜರಾಮರ ಎಂದರು.
ಪ್ರಾಂಶುಪಾಲ ಡಾ.ಪ್ರಶಾಂತ್ ಮಾತನಾಡಿ,ಬಸವೇಶ್ವರ ಆಸ್ಪತ್ರೆಯ ಶುಶ್ರೂಷಕರು ಕೋವಿಡ್ ಸಂದರ್ಭದಲ್ಲೂ ಹಗಲು ರಾತ್ರಿ ಎನ್ನದೆ ಶ್ರಮಿಸಿ ಸಮಚಿತ್ತದಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ಐಎಂಎ ಜಿಲ್ಲಾಧ್ಯಕ್ಷ ಡಾ.ಎಲ್.ಪಾಲಾಕ್ಷಯ್ಯ,ಬಸವೇಶ್ವರ ಆಸ್ಪತ್ರೆ ಗಟ್ಟಿ ಯಾಗಿ ನೆಲೆಯೂರಲು ಶುಶ್ರೂಷಕರೇ ಸೇವೆ ಕಾರಣವಾಗಿದೆ. ವೈದ್ಯರ ಸೇವೆ ಶೇ.20 ಇದ್ದರೆ,ಶೇ.80 ಸೇವೆ ಶುಶ್ರೂಷಕರದ್ದೇ ಆಗಿರುತ್ತದೆ. ಈ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಿಗೆ ಪಿಜಿ ಸೀಟುಗಳು ದೊರೆಯಲು ಶುಶ್ರೂಷಕರ ಸೇವೆಯೇ ಕಾರಣವೆಂದರು.
ಬಸವೇಶ್ವರ ನರ್ಸಿಂಗ್ ಕಾಲೇಜು ಪ್ರಾಚಾರ‌್ಯೆ ಡಾ.ಸವಿತಾ,ವಿಶ್ವದಲ್ಲಿಯೇ 3.3 ಮಿಲಿಯನ್ ಅಧಿಕ ಶುಶ್ರೂಷಕರಿದ್ದಾರೆಂದರು. ಶು ಶ್ರೂಷಕ ಅಧೀಕ್ಷಕ ಕೆಎಂಜಿ ಹಾಲಸ್ವಾಮಿ,ಉಪ ವೈದ್ಯಕೀಯ ಅಧೀಕ್ಷಕ ಡಾ.ನಾಗೇಂದ್ರಗೌಡ ಮಾತನಾಡಿದರು. ಬಸವೇಶ್ವರ ಆಸ್ಪತ್ರೆ ಶು ಶ್ರೂಷಕರಾದ ಮಲ್ಲನಗೌಡ,ಮಾರಕ್ಕ,ವಿಜಯಲಕ್ಷ್ಮೀ,ಮಾರ್ಥಾ,ರಾಜಿಸಿಸ್ಟರ್ ಹಾಗೂ ಗ್ರೂಪ್ ಡಿ ನೌಕರರಾದ ಕುಮಾರ,ರಮೇಶ್,ಪ ದ್ಮಾವತಿ,ಗಂಗಮ್ಮ,ಮೈಲಮ್ಮ,ರಾಜೇಶ್ವರಿ,ತಿಪ್ಪಮ್ಮ, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಯಶಸ್ವಿನಿ,ಶಾರದಮ್ಮ ಸಂಗಡಿಗರು ಪ್ರಾರ್ಥಿಸಿ ದರು. ಶಾರದಮ್ಮ ಸ್ವಾಗತಿಸಿ,ಆರ್.ಲಕ್ಷ್ಮೀ ವಂದಿಸಿದರು. ಎ.ಮಂಜುಶ್ರೀ ಮತ್ತು ಬಿ.ಪ್ರಿಯಾಂಕಾ ನಿರೂಪಿಸಿದರು.