ಶುಶ್ರೂಷ ಅಧಿಕಾರಿಗಳ ಸೇವೆ ಸ್ಮರಣೀಯ

12ckd3
Published on

ಚಿಕ್ಕೋಡಿ: ಶುಶ್ರೂಷ ಸೇವೆ ಮಾನವೀಯತೆಯಿಂದ ಕೂಡಿದೆ ಎಂದು ತಾಲೂಕು ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಮಹೇಶ ನಾಗರಬೆಟ್ಟ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಶ್ರೂಷ ಅಧಿಕಾರಿಗಳ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಜೀವದ ಹಂಗು ತೊರೆದು ಹಗಲು ರಾತ್ರಿಯೆನ್ನದೆ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ದಾದಿಯರ ಸೇವೆ ಸ್ಮರಣೀಯ ಎಂದರು.

ನೇತ್ರತಜ್ಞ ಡಾ.ವಿಶಾಲ ಹಡಪದ ಮಾತನಾಡಿ, ದಾದಿಯರು ಆಸ್ಪತ್ರೆಯ ಆಧಾರಸ್ತಂಭ, ರೋಗಿಯ ಸೇವೆ ಪ್ರಾಮಾಣಿಕ ಮತ್ತು ವಿನಮ್ರದಿಂದ ಕೂಡಿರಬೇಕು. ದಾದಿಯರು ಎರಡನೇ ವೈದ್ಯರು. ಅದಕ್ಕಾಗಿ ತಮ್ಮ ಜವಾಬ್ದಾರಿ ಹೆಚ್ಚಿದೆ ಎಂದರು.

ವೈದ್ಯರಾದ ಪಠಾಣ, ಶಿಲ್ಪಾ, ರೂಪಾ ಅಗಸಿಮನಿ, ವರ್ಧಮಾನ, ಸಚೀನ, ಎಎಒ ರಮೇಶ ನಾಯಕ, ಸುನೀತಾ ಕಡ್ನವರ, ಜೀವರತ್ನಾ ಚಂದನ್ನವರ, ಪ್ರಭಾವತಿ ಮೇಸ್ತ್ರಿ, ವಿಕಾಸ ಜಾಧವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net