ಶುದ್ಧ ನೀರು ಪೂರೈಸುವ ಜೆಜೆಎಂ

22 hbd 04
Published on

ಚಿಟಗುಪ್ಪ: ದೇಶದ ಗ್ರಾಮೀಣ ಭಾಗದ ಪ್ರತಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಉz್ದೆÃಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೆಜೆಎಂ ಯೋಜನೆ ರೂಪಿಸಿದ್ದು, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ, ಪೂರ್ಣಗೊಳಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಾಂಗಲೇರಾದಲ್ಲಿ ಶನಿವಾರ ಜಲ್ ಜೀವನ್ ಮಿಷನ್ ಯೋಜನೆ ಅಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ೩.೨೩ ಕೋಟಿ ರೂ. ಅನುದಾನದ, ೯೪೧ ಮನೆಗೆ ನೀರು ಸಂಪರ್ಕಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಕೆಲಸ ಎಂದು ಗ್ರಾಮಸ್ಥರು ನಿರ್ಲಕ್ಷÈ ವಹಿಸಬಾರದು. ಗುಣಮಟ್ಟದ ಕಾಮಗಾರಿ ಮಾಡುವಂತೆ ಗಮನ ಹರಿಸಬೇಕು. ಕಳಪೆಯಾಗಿದ್ದರೆ ಮೇಲಾಧಿಕಾರಿಗಳ, ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಬಸ್ ನಿಲ್ದಾಣಕ್ಕೆ ೫೦ ಲಕ್ಷ ರೂ. ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು. ಕೆಕೆಆರ್‌ಡಿಬಿ ಅನುದಾನದಲ್ಲಿ ಎರಡು ಸಿಸಿ ರಸ್ತೆ, ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್‌ಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಒಂದೆರಡು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಘಾಳೆಮ್ಮ ಹಸರಗುಂಡಗಿ, ಉಪಾಧ್ಯಕ್ಷ ಈರಪ್ಪ ಪೂಜಾರಿ, ಪಿಡಿಒ ವಿಜಯಕುಮಾರ ಬುಳ್ಳಾ, ಜೆಇ ಬಸವಂತ ಗಂದಗೆ, ಪ್ರಮುಖರಾದ ಸುರೇಶ ಮಾಶೆಟ್ಟಿ, ವಿಜಯಕುಮಾರ ವಾಲಿ, ರಾಮಲು ಮಂತ್ರಿ, ದೇವಿಂದ್ರಪ್ಪ ಮಂಗಲಗೀಕರ್, ನರೇಶ ಥೊಂಟೆ, ಪಪ್ಪು ಸ್ವಾಮಿ, ವಿಜಯಕುಮಾರ ರಾಜಗೀರ, ಪ್ರಶಾಂತ ಸಿಂದೋಲ್, ಧನರಾಜ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net