ಶುದ್ಧ ನೀರು ಪೂರೈಕೆಗೆ ಜಲಜೀವನ್ ಮಿಷನ್

06arsph2ep
ಜೆಜೆಎಂ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಭೂಮಿ ಪೂಜೆ ನೆರವೇರಿಸಿದರು. ಶ್ರುತಿ, ದಯಾನಂದ್, ರಮೇಶ್, ಧನಂಜಯ, ಭರತ್, ಕಲ್ಯಾಣಪ್ಪ ಇತರರಿದ್ದಾರೆ.
Published on

ಅರಸೀಕೆರೆ: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ತಾಲೂಕಿನ ಕರಗುಂದ ಗ್ರಾಮದಲ್ಲಿ ಇತ್ತೀಚೆಗೆ 77 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಫ್ಲೋರೈಡ್ ಪೀಡಿತರ ಬವಣೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹಳ್ಳಿಗಳಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಿವೆ. ಇದೀಗ ಜೆಜೆಎಂ(ಜಲಜೀವನ್ ಮಿಷನ್)ಅಡಿಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾವಗಲ್ ಹೋಬಳಿಗೆ ಹೊಂದಿಕೊಂಡಂತೆ ಹಲವು ಗ್ರಾಮಗಳಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ದಯಾನಂದ್, ಸದಸ್ಯರಾದ ರಮೇಶ್, ನಾಗರಾಜ, ಕಲಾಣಪ್ಪ ಪಿಡಿಒ ಭರತ್, ಇಂಜಿನಿಯರ್ ರಾಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net