ಶುದ್ಧ ನೀರು ಕುಡಿಯುವುದು ಯೋಗ್ಯ

1
ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗಗಳ ಅರಿವು ಕಾರ್ಯಕ್ರಮದಲ್ಲಿ ೇತ್ರ ಆರೋಗ್ಯ ಶಿಣಾಧಿಕಾರಿ ಐ.ಆರ್​. ಗಂಜಿ ಮಾಡಿದರು. ಡಾ.ಎಸ್​.ಎಲ್​. ದಂಡಗಿ, ಆರ್​. ಮೇಘಾ, ವೀಣಾ ಹಣಮಸಾಗರ ಇದ್ದರು.
Published on

ಮುನವಳ್ಳಿ: ಶುದ್ಧ ಕುಡಿಯುವ ನೀರು ಉಪಯೋಗಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾ-ಧಿಕಾರಿ ಡಾ.ಎಸ್​.ಎಲ್​. ದಂಡಗಿ ಹೇಳಿದರು.

ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಳೆಗಾಲ ಪ್ರಾರಂಭದಿಂದ ನೀರು ಕಲುಷಿತಗೊಂಡು ಕಾಲರಾ, ಕಾಮಾಲೆ, ವಾಂತಿ&ಭೇದಿ ಆಮಶಂಕೆ, ಟೈಪಾಯ್ಡ್​ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಶುದ್ಧ ನೀರು ಕುಡಿಯಬೇಕು ಎಂದರು.

ೇತ್ರ ಆರೋಗ್ಯ ಶಿಣಾಧಿಕಾರಿ ಐ.ಆರ್​.ಗಂಜಿ ಮಾತನಾಡಿ, ರಾಜ್ಯದಲ್ಲಿ ಡೆಂ ತೀವ್ರವಾಗಿ ಹರಡುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಅನಾರೋಗ್ಯ ಕಂಡುಬಂದರೆ ತಕ್ಷಣ ಆರೋಗ್ಯ ಕೇಂದ್ರಕ್ಕೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಅಧಿಕಾರಿಗಳಾದ ವಿಶ್ವಾಸ ಹಿರೇಮಠ, ವೀಣಾ ಹಣಮಸಾಗರ, ಆರ್​.ಮೇಘಾ, ಶಶಿಕಲಾ ಕಾಡಯ್ಯನವರ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net