ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರ ಆರಂಭ

21ydg03
Published on


ಯಾದಗಿರಿ: ನಗರದಲ್ಲಿನ ನಾಲ್ಕು ಎಂಎಲ್ಡಿ ಸಾಮಥ್ರ್ಯದ ಜಲ ಶುದ್ಧೀಕರಣ ಘಟಕಗಳು ತೀರಾ ಹಳೆಯದಾಗಿದ್ದು ಪ್ರಗತಿಯಲ್ಲಿರುವ ಹೊಸ ಘಟಕದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಶಹಾಪುರದ ಫಿಲ್ಟರ್ಬೆಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, 55 ಸಾವಿರಕ್ಕೂ ಅಕ ಜನಸಂಖ್ಯೆ ಹೊಂದಿದ ಶಹಾಪುರ ನಗರ ಜನತೆಗೆ 4 ಎಂಎಲ್ಡಿ ಸಾಮಥ್ರ್ಯದ ಜಲ ಶುದ್ಧೀಕರಣ ಘಟಕದಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ, 16 ಕೋಟಿ ರೂ.ವೆಚ್ಚದಲ್ಲಿ 11.55 ಎಂಎಲ್ಡಿ ಸಾಮಥ್ರ್ಯದ ಹೊಸ ಘಟಕ ಕಾಮಗಾರಿ ಬಹುತೇಕ ಪರಿಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಯರ್ಾರಂಭ ಮಾಡಲಿದೆ ಎಂದರು.

ಈ ಘಟಕದಿಂದ ನಗರದ ಸಿಬಿ ಟ್ಯಾಂಕ್, ರಾಘವೆಂದ್ರ ಗುಡಿ, ಬಾಪುಗೌಡ ಕಾಲೋನಿ, ರಾಖಂಗೇರಾ. ಓವರ್ ಟ್ಯಾಂಕ್ಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಅಮೃತ ಯೋಜನೆ 3ಪೇಸ್ನಲ್ಲಿ 95 ಕೋಟಿ ರೂ.ವೆಚ್ಚದಲ್ಲಿ ನಗರದಲ್ಲಿ ಹೊಸ ಪೈಪಲೈನ್ ವಿದ್ಯುತ್ ಕಂಬಗಳ ಜೋಡಣೆ ಸೇರಿ ಕುಡಿಯುವ ನೀರು ಸರಬರಾಜು ಸರಾಗಗೊಳಿಸಲು ಈ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ 21 ಕೋಟಿ ವೆಚ್ಚದಲ್ಲಿ ಭೀ.ಗುಡಿ, ಕಂಚನಕವಿ, ಹುಲಕಲ್, ಶಖಾಪುರ ತಾಂಡಗಳಲ್ಲಿಕುಡಿಯುವ ನೀರು ಪೂರೈಕೆ ಮತ್ತು ಹೊಸ ಪೈಪಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಗರೋತ್ಥಾನ ಯೋಜನೆಯ 3.5 ಕೋಟಿ ರೂ.ವೆಚ್ಚದಲ್ಲಿ ನೀರಿನ ಘಟಕದ ಸುತ್ತಲು ಕಾಂಪೌಂಡ್ ಸೇರಿ ಸುರಕ್ಷಿತ ಕಾಮಗಾರಿಗಳಿಗೆ ಕ್ರೀಯಾಯೋಜನೆ ರೂಪಿಸಲಾಗಿದೆ. ಭೀಮಾ ನದಿಯಿಂದ ಶಹಾಪುರ ನಗರಕ್ಕೆ ನೀರು ಸರಬರಾಜು ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಅಕ್ಟೋಬರ್ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಲೋಕಾರ್ಪಣೆಗೊಳಿಸುವ ಚಿಂತನೆ ಇದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net