ಶುದ್ಧ ಕುಡಿಯುವ ನೀರಿಗಾಗಿ ಶೀಘ್ರ ಸ್ಪಂದಿಸಿ

15 ydg 03
Published on

ಯಾದಗಿರಿ: ಜಿ¯್ಲೆಯಲ್ಲಿನ ಜನರ ಗಂಭೀರ ಸ್ವರೂಪದ ಸಮಸ್ಯೆಗಳಾದ ಕುಡಿಯುವ ನೀರು, ಅನP್ಷÀರತೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರು ಸೇರ್ಪಡೆ, ಜನರ ವಲಸೆ, ತಾಯಿ-ಶಿಶುಮರಣ ಪ್ರಮಾಣ ತಡೆ ಸೇರಿ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದು ರಾಯಚೂರು ಸಂಸದ ಹಾಗೂ ಜಿ¯್ಲÁ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯP್ಷÀ ಜಿ.ಕುಮಾರ ನಾಯಕ್ ಸೂಚಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿ¯್ಲÁ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯP್ಷÀತೆ ವಹಿಸಿ ಮಾತನಾಡಿದ ಅವರು, ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ, ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವAತೆ ಅವರು ತಾಕೀತು ಮಾಡಿದರು.

ಜಿ¯್ಲÉಯ ರೈತರಲ್ಲಿ ಯೂರಿಯಾ ಹಾಗೂ ಡಿಎಪಿಗೆ ಪರ್ಯಾಯವಾಗಿ ನೀಡಲಾಗುವ ನ್ಯಾನೋ ರಸಗೊಬ್ಬರ ಬಳಕೆ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು. ಸ್ಪಿçÃಂಕ್ಲರ್, ಮಣ್ಣು ಪರೀಕ್ಷೆ, ಮಣ್ಣು ಪರೀಕ್ಷೆ ಕಾರ್ಡ್ ವಿತರಣೆ ಕುರಿತಂತೆ ಅಗತ್ಯ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿ¯್ಲÉಯ ಯಾದಗಿರಿ ಬೈಪಾಸ್, ಶಹಾಪುರ ಬೈಪಾಸ್‌ರಸ್ತೆ, ರಾಮಸಮುದ್ರ ಹತ್ತಿರದಿಂದ ಗುರುಮಠಕಲï-ಹೈದರಾಬಾದ್ ರಸ್ತೆ, ಸೂರತ್-ಚೆನೈ ರಸ್ತೆಗಳ ವ್ಯಾಪ್ತಿಯ ಸಮಸ್ಯೆಗಳ ನಿವಾರಣೆಗೆ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪರಿಹರಿಸಿಕೊಳ್ಳಬೇಕು ಎಂದರು.

ಕೈಗೊAಡ ಕ್ರಮದ ಬಗ್ಗೆ ಕೂಡಲೇ ವರದಿ ಸಹ ಸಲ್ಲಿಸಬೇಕು. ಅದರಂತೆ ಜಲಜೀವನ್ ಮಿಷನ್ ಜಲಧಾರೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಿ¯್ಲÁಧಿಕಾರಿಗಳು ಹಾಗೂ ಜಿಪಂ ಸಿಇಒ ಅವರ ಮೇಲುಸ್ತುವಾರಿಯಲ್ಲಿ ಸಂಬAಧಿಸಿದ ಅಧಿಕಾರಿಗಳ ಮೂಲಕ ಗುರಿಗೆ ತಕ್ಕಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿ¯್ಲÁಧಿಕಾರಿ ಹರ್ಷಲï ಬೋಯರ್ ಮಾತನಾಡಿ, ವಿವಿಧ ಸಮಸ್ಯೆ ಪರಿಹರಿಸುವ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಜಿ¯್ಲÁ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರ್ಡಿಯಾ, ಎಸ್‌ಪಿ ಪೃಥ್ವಿಕ್ ಶಂಕರ್, ನಾಮನಿರ್ದೇಶಿತ ಸದಸ್ಯರು ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net