

ಮೈಸೂರು: ಅಡುಗೆ ಸಿಬ್ಬಂದಿ ಸಮಯಪಾಲನೆ ಮಾಡುವುದರ ಜೊತಗೆ ಶುಚಿಯಾದ ಸಮವಸ್ತ್ರ ಧರಿಸಿರಬೇಕು. ಅಡುಗೆ ಕೋಣೆ ಸೇರಿದಂತೆ ಅಕ್ಕ, ಪಕ್ಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಸೂಚಿಸಿದರು.
ರಾಘವೇಂದ್ರನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಕಲ್ಯಾಣಾಧಿಕಾರಿಗಳು, ನಿಲಯಪಾಲಕರು ಹಾಗೂ ಅಡುಗೆ ಸಿಬ್ಬಂದಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಡುಗೆ ಮಾಡುವಾಗ ತರಕಾರಿ ಹಾಗೂ ಧಾನ್ಯಗಳನ್ನು ತೊಳೆದು ಉಪಯೋಗಿಸಬೇಕು. ಮಕ್ಕಳಿಗೆ ಆಹಾರ ಬಡಿಸುವ ಸಂದರ್ಭದಲ್ಲಿ ಎಲ್ಲ್ಲ ಅಡುಗೆ ಸಿಬ್ಬಂದಿ ಹಾಗೂ ನಿಲಯಪಾಲಕರು ಹಾಜರಿರಬೇಕು ಪ್ರತಿದಿನ ಮೆನುಚಾರ್ಟ್ ಪ್ರಕಾರ ಅಡುಗೆ ಮಾಡಬೇಕು ಎಂದು ತಿಳಿಸಿದರು.
ನಿಲಯಪಾಲಕರಾಗಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಸರಿಯಾಗಿ ಲೆಕ್ಕನಿರ್ವಹಣೆ ಮಾಡದಿದ್ದರೆ ಅಂತಹವರನ್ನು ಮತ್ತೆ ಅಡುಗೆ ಕೆಲಸಕ್ಕೆ ಕಳುಹಿಸಲಾಗುವುದು. ಆಗಾಗ್ಗೆ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ಪರಿಶೀಲನೆ ಮಾಡಲಾಗುವುದು. ಲೋಪಗಳು ಕಂಡುಬಂದರೆ ಆಯಾ ಹಾಸ್ಟೆಲ್ ವಾರ್ಡನ್‌ಗಳು ಹಾಗೂ ತಾಲೂಕು ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಕಲ್ಯಾಣಾಧಿಕಾರಿಗಳಾದ ಚಂದ್ರಕಲಾ ವಿಶ್ವನಾಥ್, ಸ್ವರ್ಣಲತಾ, ಶಶಿಕಲಾ, ಮಹೇಶ್, ಪ್ರೇಮ್‌ಕುಮಾರ್, ಕಚೇರಿ ವ್ಯವಸ್ಥಾಪಕರಾದ ದೀಪಕ್‌ು, ಛಾಯಾ, ವಿಸ್ತರಣಾಧಿಕಾರಿಗಳಾದ ಸತೀಶ್, ಸುಕನ್ಯ, ಪೂರ್ಣಿಮ, ರಮ್ಯ, ಲೀಲಾ, ಎಲ್ಲ ನಿಲಯಪಲಕರು, ಅಡುಗೆ ಸಿಬ್ಬಂದಿ ಇದ್ದರು.