

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4087ಕ್ಕೆ ಏರಿದೆ. ಈವರೆಗೆ 1871 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2085 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 131 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಪತ್ತೆಯಾದ ಪ್ರಕರಣಗಳ ತಾಲೂಕುವಾರು ಮಾಹಿತಿ ಇಂತಿದೆ.
ಧಾರವಾಡ ತಾಲೂಕು:
ಮದಿಹಾಳ, ಉಪಕಾರಾಗೃಹ ರಸ್ತೆ ಸೈದಾಪುರ, ಉಪಕಾರಾಗೃಹ ವಸತಿಗೃಹ, ಗಾಂಧಿನಗರ, ಸತ್ತೂರಿನ ಎಸ್ಡಿಎಂ ದಂತ ಆಸ್ಪತ್ರೆ, ಎಸ್ಡಿಎಂ ಆಸ್ಪತ್ರೆ, ಶ್ರೀರಾಮನಗರ, ಸಾಧನಕೇರಿ, ಶ್ರೀನಗರ, ಕುಮಾರೇಶ್ವರನಗರ ಬಳಿ, ಯಾಲಕ್ಕಿಶೆಟ್ಟರ್ ಕಾಲನಿ, ಚರಂತಿಮಠ ಗಾರ್ಡನ್, ಚನ್ನಬಸವೇಶ್ವರ ನಗರ, ಮಾಳಾಪುರ, ಮರಾಠಾ ಕಾಲನಿ ಹತ್ತಿರ, ಕಾಮನಕಟ್ಟಿ, ಕೃಷಿ ವಿಶ್ವವಿದ್ಯಾಲಯ ಆವರಣ, ಸಾಧೂನವರ ಪ್ಲಾಟ್, ಸಪ್ತಾಪುರ, ಸುಣಗಾರ ಓಣಿ, ಕಲಕೇರಿ ಗ್ರಾಮ, ಚರಂತಿಮಠ ಗಲ್ಲಿ, ಮಣಕಿಲ್ಲಾ, ಪೊಲೀಸ್ ವಸತಿಗೃಹ, ಗರಗ ಪೊಲೀಸ್ ಠಾಣೆ, ಕಕ್ಕಯ್ಯ ನಗರ, ಮಾಳಮಡ್ಡಿ ಮಂಜುನಾಥಪುರ, ಉದಯಗಿರಿ, ಜಯನಗರದ ಜನ್ನತ್ ಪ್ಲಾಟ್, ರಾಘವೇಂದ್ರನಗರ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಗೊಲ್ಲರ ಕಾಲನಿ, ಬಸವೇಶ್ವರನಗರ, ಹನುಮಂತನಗರ, ಉಪ್ಪಿನಬೆಟಗೇರಿ ಗ್ರಾಮ, ಸತ್ತೂರಿನ ಆಶ್ರಯ ಕಾಲನಿ, ವನಸಿರಿ ನಗರ.
ಹುಬ್ಬಳ್ಳಿ ತಾಲೂಕು:
ಗೋಕುಲ ರಸ್ತೆ 1ನೇ ಕ್ರಾಸ್ ಜೆಪಿನಗರ, ಪ್ರಿಯದರ್ಶಿನಿ ಕಾಲನಿ, ಕಿಮ್ಸ್ ಆವರಣ, ಮುರಾರ್ಜಿನಗರ, ಹೊಸೂರ, ಶೆಟ್ಟರ್ ಲೇಔಟ್, ಮಾರುತಿನಗರ ಹೆಗ್ಗೇರಿ, ಮಾಧವನಗರ, ರಾಜನಗರ, ತುಮಕೂರ ಓಣಿ, ಪೆಸಿಫಿಕ್ ಮ್ಯಾನ್ಶನ್ ಅರಿಹಂತ ನಗರ, ಭವಾನಿನಗರ, ನವನಗರ, ಇಂಗಳಹಳ್ಳಿ ಗ್ರಾಮ, ಗಣೇಶಪೇಟ, ಪಗಡಿ ಗಲ್ಲಿ, ಸಾಯಿನಗರ ಉಣಕಲ್ಲ, ಸದರಸೋಫಾ, ಮಧುರಾ ಕಾಲನಿ, ಕೇಶ್ವಾಪುರದ ಮಧುರಾ ಎಸ್ಟೇಟ್, ಶಾಂತಿನಗರ, ಹೇಮಂತನಗರ, ಗುರುನಾಥನಗರ, ಗೋಕುಲ ರಸ್ತೆ ಅಕ್ಷಯ ಪಾರ್ಕ್, ರವಿನಗರ, ವಿದ್ಯಾನಗರ, ಗದಗ ರಸ್ತೆ ಕಾರುಣ್ಯ ಕಾಲನಿ, ವಿಜಯನಗರ, ಕಮರಿಪೇಟ, ಆನಂದನಗರ ರಸ್ತೆ ಇಂದ್ರಪ್ರಸ್ಥನಗರ, ಅಮರಗೋಳ ಪ್ರಾಥಮಿಕ ಶಾಲೆ, ಸುಭಾಷ ನಗರ ಕೆಎಚ್ಬಿ ಕಾಲನಿ, ಮೌಲಾಲಿ ಗ್ರೌಂಡ ರೈಲ್ವೆ ಸುರಕ್ಷಾದಳ, ಅಮರಗೋಳ ಆಶ್ರಯ ಪ್ಲಾಟ್, ಗೋಪನಕೊಪ್ಪ, ನೇಕಾರನಗರ. ನೂಲ್ವಿ ಗ್ರಾಮ, ಸಿಂಪಿ ಗಲ್ಲಿ, ಹನುಮಂತ ನಗರ, ಜಾಡಗೇರ ಓಣಿ, ಗಬ್ಬೂರ, ಭಂಡಿವಾಡ ಗ್ರಾಮ, ವಿಜಯನಗರ, ಭೂಸಪೇಟ, ಭೈರಿದೇವರಕೊಪ್ಪದ ಮಾಣಿಕಬಾಗ್ ಬಳಿ, ಶ್ರೇಯಾ ಪಾರ್ಕ್, ಗಾಮನಗಟ್ಟಿ, ಅರವಿಂದನಗರ, ಮಹಾವೀರ ಕಾಲನಿ, ಮಂಟೂರ ರಸ್ತೆ, ನವನಗರದ ಎಪಿಎಂಸಿ ಮಹಿಳೆಯರ ವಸತಿ ನಿಲಯ, ಲಿಂಗರಾಜನಗರ, ಬಂಕಾಪುರ ಚೌಕ್, ಬಣಗಾರಪೇಟ್, ವಿವೇಕಾಂದನಗರ, ಈಶ್ವರನಗರ, ಫಾರೆಸ್ಟ್ ಕಾಲನಿ, ಸಿದ್ದಾರೂಢ ಮಠ, ಚೇತನ ಕಾಲನಿ.
ಕುಂದಗೋಳ ಬಸ್ ನಿಲ್ದಾಣ ಹತ್ತಿರ, ಕಳಸ ಗ್ರಾಮ, ಅಣ್ಣಿಗೇರಿ ಉದಯನಗರ, ಕಲಘಟಗಿ ತಾಲೂಕಿನ ಕಾಮಧೇನು, ನವಲಗುಂದ ಅಂಬೇಡ್ಕರ್ ಓಣಿ, ಸವದತ್ತಿ ತಾಲೂಕು ಮುನವಳ್ಳಿ ಗ್ರಾಮ, ಬೈಲಹೊಂಗಲ ತಾಲೂಕು ಸಂಪಗಾಂವ್ ಗ್ರಾಮ, ಖುದಾನಪುರ ಗ್ರಾಮ ಹಾಗೂ ಬಾಗಲಕೋಟೆ ಜಿಲ್ಲೆ ಸಿಕ್ಕೇರಿ ಕ್ರಾಸ್ ಬಳಿ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋವಿಡ್ನಿಂದ 7 ಜನ ಸಾವು
ಧಾರವಾಡ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಜಿಲ್ಲೆಯ 6 ಜನ ಹಾಗೂ ಬಾಗಲಕೋಟೆಯ ಒಬ್ಬರು ಸೇರಿ ಒಟ್ಟು 7 ಜನ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶುಕ್ರವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು, ಇತರ ಲಕ್ಷಣಗಳಿಂದ ಬಳಲುತ್ತಿದ್ದ ಹುಬ್ಬಳ್ಳಿಯ 30 ವರ್ಷದ ಯುವತಿ, ಗಣೇಶನಗರದ 72 ವರ್ಷದ ವೃದ್ಧ, ಲಿಂಗರಾಜನಗರದ 91 ವರ್ಷದ ವೃದ್ಧ, ಹಳೇಹುಬ್ಬಳ್ಳಿ ಸದರಸೋಫಾದ 45 ವರ್ಷದ ಮಹಿಳೆ, ವಿನಾಯಕನಗರದ 60 ವರ್ಷದ ವೃದ್ಧ, ಧಾರವಾಡ ಯಾಲಕ್ಕಿಶೆಟ್ಟರ್ ಕಾಲನಿಯ 77 ವರ್ಷದ ವೃದ್ಧ ಹಾಗೂ ಬಾಗಲಕೋಟೆ ಸಿಕ್ಕೇರಿ ಕ್ರಾಸ್ನ 69 ವರ್ಷದ ವೃದ್ಧ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸೋಂಕಿತ ಮೃತಪಟ್ಟ ವಾರದ ನಂತರ ಸೀಲ್ಡೌನ್
ಧಾರವಾಡ: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಅನೇಕ ಎಡವಟ್ಟುಗಳು ಸಂಭವಿಸುತ್ತಲೇ ಇವೆ.
ಸೋಂಕಿತ ವ್ಯಕ್ತಿ ಚಿಕಿತ್ಸೆಯಿಂದ ಗುಣವಾಗಿ ಮನೆಗೆ ಆಗಮಿಸಿದ ಬಳಿಕ ಸೀಲ್ಡೌನ್ ಮಾಡುವ ಕಾರ್ಯ ನಗರದಲ್ಲಿ ನಡೆಯುತ್ತಿದೆ. ಇದು ನಗರದ ಬಹುತೇಕ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇಂತಹ ಘಟನೆಗೆ ಇದಕ್ಕೆ ಇಲ್ಲಿನ ಮೃತ್ಯುಂಜಯನಗರ ಕೊಟ್ಟಣದ ಓಣಿಯೇ ಸಾಕ್ಷಿ.
ಈ ಓಣಿಯಲ್ಲಿ ವೃದ್ಧರೊಬ್ಬರಿಗೆ ಜು. 23ರಂದು ಸೋಂಕು ದೃಢಪಟ್ಟಿತ್ತು. ಮರುದಿನವೇ ಅವರು ಮೃತಪಟ್ಟಿದ್ದರು. ಆದರೆ ಈ ಮಾಹಿತಿ ಕಿಮ್್ಸ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗಮನಕ್ಕೇ ಇಲ್ಲವಾಗಿದೆ. ವೃದ್ಧ ಮತಪಟ್ಟು 2 ದಿನಗಳ ಬಳಿಕ ಕಿಮ್್ಸ ಸಿಬ್ಬಂದಿ ದೂರವಾಣಿ ಕರೆ ಮಾಡಿ ಸೋಂಕು ತಗುಲಿದ ವ್ಯಕ್ತಿ ಹುಷಾರಾಗಿದ್ದಾರಾ? ಎಂದು ಕೇಳಿದ್ದರು. ಆಗ ಮನೆ ಸದಸ್ಯರು ಆತ ಮೃತಪಟ್ಟು 2 ದಿನವಾಗಿದೆ ಎಂದು ಉತ್ತರಿಸಿದ್ದರು.
ಇದಾದ 2 ದಿನಗಳ ನಂತರ ಮತ್ತೆ ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿ ವೃದ್ಧನ ಆರೋಗ್ಯ ವಿಚಾರಿಸಲು ಮುಂದಾಗಿದ್ದಾರೆ. ಅವರು ನಿಧನವಾಗಿದ್ದಾರೆಂದು ಪುನಃ ಕುಟುಂಬದ ಸದಸ್ಯರು ಸ್ಪಷ್ಟಪಡಿಸಿದ್ದರು. ಇದೀಗ ವೃದ್ಧ ಮತಪಟ್ಟ ಒಂದು ವಾರದ ಬಳಿಕ (ಜು. 30ರಂದು) ಮನೆ ಸೀಲ್ಡೌನ್ ಮಾಡಿರುವುದು ಹಾಸ್ಯಾಸ್ಪದವಾಗಿದೆ.
ವೃದ್ಧನಿಂದ ಅವರ ಕುಟುಂಬದ ಯಾರಿಗೂ ಸೋಂಕು ತಗುಲಿಲ್ಲ. ಆದಾಗ್ಯೂ ಸೀಲ್ಡೌನ್ ಮಾಡುತ್ತಿರುವುದಕ್ಕೆ ಮನೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸಿಬ್ಬಂದಿ ಮಾತ್ರ ಅದ್ಯಾವುದಕ್ಕೂ ಕ್ಯಾರೆ ಎನ್ನದೆ ನಾವು ಹೇಳಿದ ಕೆಲಸ ಮಾಡುತ್ತೇವೆ ಎಂದು ಮನೆ ಎದುರು ಗ್ರಿಲ್ ಹಾಕಿ ಸೀಲ್ಡೌನ್ ಮಾಡಿದ್ದಾರೆ ಎಂದು ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಪೂರ್ವ ಆರ್ಟಿಒ ಕಚೇರಿ ಸೀಲ್ಡೌನ್
ಹುಬ್ಬಳ್ಳಿ: ಇಲ್ಲಿಯ ಗಬ್ಬೂರ ಬಳಿಯ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಕಚೇರಿಯನ್ನು ಎರಡು ದಿನ ಸೀಲ್ಡೌನ್ ಮಾಡಲಾಗಿದೆ.
ಸಿಬ್ಬಂದಿಯೊಬ್ಬರಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕರೊನಾ ಪಾಸಿಟಿವ್ ಬಂದಿದೆ. ಶುಕ್ರವಾರ ಪ್ರಕರಣ ಪತ್ತೆಯಾದ ನಂತರ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ನಾಳೆ, ನಾಡಿದ್ದು ಇನ್ನೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತದೆ. ಅಲ್ಲಿಯವರೆಗೆ ಕಚೇರಿ ಸೀಲ್ಡೌನ್ ಮಾಡಲಾಗುತ್ತದೆ. ಸೋಮವಾರದಿಂದ ಎಂದಿನಂತೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.