

ಕಾರವಾರ: ಜಿಲ್ಲೆಯ 101 ಜನರಿಗೆ ಶುಕ್ರವಾರ ಕರೊನಾ ಖಚಿತವಾಗಿದೆ. 88 ಜನರು ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.
ಕಾರವಾರದಲ್ಲಿ 10, ಅಂಕೋಲಾದಲ್ಲಿ 2, ಕುಮಟಾದಲ್ಲಿ 5, ಹೊನ್ನಾವರದಲ್ಲಿ 11, ಭಟ್ಕಳದಲ್ಲಿ 33, ಶಿರಸಿಯಲ್ಲಿ 19, ಮುಂಡಗೋಡಿನಲ್ಲಿ 6, ಹಳಿಯಾಳದಲ್ಲಿ 10, ಜೊಯಿಡಾದಲ್ಲಿ 5 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 4618ಕ್ಕೆ ಏರಿದೆ. 1133 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 510 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 42 ಜನ ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರವಾರ 5, ಅಂಕೋಲಾದ 5, ಕುಮಟಾದ 8, ಹೊನ್ನಾವರದಲ್ಲಿ 1, ಜೊಯಿಡಾದಲ್ಲಿ 1 ಭಟ್ಕಳದಲ್ಲಿ 22, ಶಿರಸಿಯಲ್ಲಿ 9, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 4, ಮುಂಡಗೋಡಿನಲ್ಲಿ 11, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 21 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಕರೊನಾ ಮುಕ್ತರಾದವರ ಸಂಖ್ಯೆ 3434 ಆಗಿದೆ. ಹೊನ್ನಾವರದಲ್ಲಿ ಇಬ್ಬರು, ಹಳಿಯಾಳದಲ್ಲಿ ಒಬ್ಬ ವ್ಯಕ್ತಿ ಕರೊನಾದಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕರೊನಾದಿಂದ ಮೃತರಾದವರ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ.
ಕರೊನಾ ರೋಗಕ್ಕೆ ಧೈರ್ಯವೇ ಮದ್ದು: ಮುಂಡಗೋಡ: ಕರೊನಾ ವೈರಸ್ ಬಗ್ಗೆ ಯಾರೂ ಭಯಪಡಬಾರದು. ಮನುಷ್ಯನಿಗೆ ಧೈರ್ಯವೇ ಮುಖ್ಯ. ಸಮಾಜ ಕರೊನಾ ರೋಗಿಗಳನ್ನು ಕಡೆಗಣಿಸಬಾರದು ಎಂದು ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು. ಕರೊನಾ ಗೆದ್ದು ಬಂದ ನಂತರ ‘ವಿಜಯವಾಣಿ’ಯೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಾನು, ನನ್ನ ಪತ್ನಿ, ಮಗಳು ಹಾಗೂ ಮೊಮ್ಮಕ್ಕಳು 12 ದಿವಸ ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖ ರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.