ಶೀಘ್ರವೇ ಕಲಾ ಗ್ಯಾಲರಿ ನಿರ್ಮಿಸಲು ಕ್ರಮ: ಎಂ.ಚಂದ್ರೇಗೌಡ

ಶೀಘ್ರವೇ ಕಲಾ ಗ್ಯಾಲರಿ ನಿರ್ಮಿಸಲು ಕ್ರಮ: ಎಂ.ಚಂದ್ರೇಗೌಡ
Published on

ಹಾಸನ: ಚಿತ್ರಕಲಾವಿದರ ಬಹುದಿನಗಳ ಬೇಡಿಕೆಯಂತೆ ಉತ್ತಮ ಸ್ಥಳ ಗುರುತಿಸಿ ಕಲಾ ಗ್ಯಾಲರಿ ನಿರ್ಮಿಸಲು ಕ್ರಮ ವಹಿಸಲಾಗುವುದೆಂದು ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರು ಭರವಸೆ ನೀಡಿದರು.
ನಗರದ ಸಂಸ್ಕೃತ ಭವನದಲ್ಲಿ ಶಾಂತಲಾ ಆರ್ಟ್ಸ್ ಗ್ರೂಪ್ ಶೋ ವತಿಯಿಂದ ಸೋಮವಾರ ಹಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗು ಕಲಾಕೃತಿಗಳ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಆರ್ಟ್ ಗ್ಯಾಲರಿ ಇಲ್ಲ. ಈ ಸೌಲಭ್ಯಕ್ಕಾಗಿ ಕಳೆದ 25 ವರ್ಷಗಳಿಂದಲೂ ಚಿತ್ರಕಲಾವಿದರು ಹೋರಾಟ ಮಾಡುತ್ತಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಸಾರ್ವಜನಿಕ ಸೇವೆಯ ಸದಾವಕಾಶ ದೊರೆತಿದ್ದು ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ನಗರದಲ್ಲಿ ಸೂಕ್ತ ಜಾಗ ಗುರುತಿಸಿದರೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಹಿರಿಯ ಚಿತ್ರಕಲಾವಿದ ಅಮೃತಚಾರಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಪತ್ರಕರ್ತ ರವಿ ನಾಕಲಗೂಡು, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ನಿರ್ಮಲ ಕಲಾ ಶಾಲೆಯ ಕರದಕಟ್ಟಿ, ಸಾಹಿತಿ ಗೊರೂರು ಅನಂತರಾಜು, ಲೇಖಕಿ ಸಿ.ಸುವರ್ಣ, ಚಿತ್ರಕಲಾವಿದ ಶಿವಕುಮಾರ್, ಲತಾ, ಬಸವರಾಜ್, ಯೋಗಾನಂದ್, ಗೋಪಾಲ್ ಹಾಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net