

ಚಿತ್ರದುರ್ಗ: ರಾಜ್ಯದಲ್ಲಿ ಖಾಲಿ ಇರುವ ಅಂದಾಜು 20 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಎಸ್‌ಪಿಗಳಿಗೆ ಅನುಮತಿ ನೀಡಲಾಗಿದೆ ಎಂ ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾನ್‌ಸ್ಟೇಬಲ್‌ಗಳ ನೇಮಕ ನಿರಂತರ ನಡಿತಾ ಇರುತ್ತದೆ. ಹಿಂದಿ ನ ಬಿಜೆಪಿ ಆಡಳಿತದ 4 ವರ್ಷಗಳಲ್ಲಿ ಈ ಹುದ್ದೆಗಳು ಭರ್ತಿಯಾಗಿಲ್ಲ. ಅಧಿಸೂಚನೆ ಹೊರಡಿಸುತ್ತಿದ್ದಂತೆ ಕಾನ್‌ಸ್ಟೇಬಲ್‌ಗಳ ನೇಮಕ ಪ್ರ ಕ್ರಿಯೆ ಆರಂಭವಾಗಲಿದೆ.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಡಿಸಿಆರ್‌ಇ ಠಾಣೆ ಆರಂಭಿಸಲು ಕ್ಯಾಬಿನೆಟ್ ಅನುಮೋದಿಸಿದೆ. ಇಲಾಖೆ ಕೂಡ ತೀರ್ಮಾನಿಸಿದೆ.ಠಾಣೆ ಸ್ಥಾ ಪನೆಗೆ ಅಗತ್ಯವಿರುವ ನಿಯಮಗಳು,ಅಧಿಕಾರಿ,ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಪರಿಶೀಲಿಸಲಾತ್ತಿದ್ದು,ಶೀ ಘ್ರದಲ್ಲೇ ಈ ಠಾಣೆಗಳು ಕಾರ‌್ಯಾರಂಭವಾಗಲಿವೆ.
ಪಿಎಸ್‌ಐ ನೇಮಕ ಆದೇಶ
ಪಿಎಸ್‌ಐ ನೇಮಕ ಹಗರಣದ ತನಿಖೆ ಚಾಲ್ತಿಯಲ್ಲಿದ್ದು,545 ಪಿಎಸ್‌ಐ ನೇಮಕಕ್ಕೆ ಮರು ಪರೀಕ್ಷೆ ನಡೆಸಿ ಅರ್ಹರ ಪಟ್ಟಿ ಸಿದ್ಧಪಡಿಸ ಲಾಗಿದೆ. 371ಜೆ ಇತ್ಯಾದಿ ನಿಯಮಗಳ ತೊಡಕಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ನೇಮಕ ಆದೇಶ ಹೊರಡಿಸುವುದಾಗಿ ಹೇಳಿದರು.
ಆರೋಪಿಗಳನ್ನು ಬಂಧಿಸಿದ ಬಳಿಕ ಗೃಹ ಸಚಿವರ ತಮ್ಮ ಮನೆಗೆ ಬರಲಿ ಎಂಬ ಮೃತ ಪಿಎಸ್‌ಐ ಪರುಶುರಾಮ್ ಕುಟುಂಬದವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಅವರ ಮನಸ್ಸಿಗೆ ನೋವಾಗಿರುವುದು ಸ್ವಾಭಾವಿಕ. ಅವರು ಹಾಗೆ ಹೇಳಲೇ ಬೇಕು. ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ,ಸರ್ಕಾರದ ತೀರ್ಮಾನ ತಿಳಿಸಲಾಗುವುದು. ಈ ಪ್ರಕರಣ ಸಿಐಡಿಗೆ ಒಪ್ಪಿಸಲಾಗಿದೆ ಎಂದರು.
ಪೊಲೀಸ್ ಅಧಿಕಾರಿಗಳು ಪೋಸ್ಟಿಂಗ್‌ಗೆ ಲಕ್ಷಾಂತರ ರೂ.,ಕೋಟ್ಯಂತರ ರೂ.ಕೊಡಬೇಕೆಂಬ ನಿವೃತ್ತ ಪೊಲೀಸ್‌ಅಧಿಕಾರಿ ಭಾಸ್ಕರ್‌ರಾ ವ್ ಹೇಳಿಕೆಗೆ, ಅವರ ಬಳಿ ಮಾಹಿತಿ ಇದ್ದರೆ ತಿಳಿಸಲಿ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರ ಮಾತಿಗೆ,ಅದು ಅವರ ಆಸೆ,ಬೇಡಿಕೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.
ರಾಜ್ಯದಲ್ಲಿ ವೀಕ್ ಮುಖ್ಯಮಂತ್ರಿ ಇದ್ದಾರೆಂಬ ಪ್ರತಿಪಕ್ಷ ನಾಯಕ ಛಲ ವಾದಿನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕ ರಿಸಿದರು. ದಲಿತ ಮುಖ್ಯಮಂತ್ರಿ ಚರ್ಚೆಯಾಗಿಲ್ಲವೆಂದರು. ಮುಡಾ ಹಗರಣಕ್ಕೆ ಸಂಬಂಧಿಸಿ, ರಾಜ್ಯಪಾಲರಿಗೆ ಸಿಎಂ ವಿರುದ್ಧ ಮತ್ತೊ ಂದು ದೂರು ನೀಡಿರುವ ಕುರಿತಂತೆ,ಯಾರಾದರೂ ದಾಖಲೆ,ದೂರುಗಳಿದ್ದರೆ ದೇಸಾಯಿ ಆಯೋಗಕ್ಕೆ ಕೊಡಲಿ ಎಂದರು.
ಎಡಿಜಿಪಿ ಆರ್.ಹಿತೇಂದ್ರ,ಡಿಐಜಿ ರಮೇಶ್‌ಬಾರ್ಕೆರ್,ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ,ಎಎಸ್‌ಪಿ ಎಸ್.ಜೆ.ಕುಮಾರ ಸ್ವಾಮಿ,ಡಿವೈಎಸ್ ಪಿ ಪಿ.ಕೆ.ದಿನಕರ್ ಮತ್ತಿತರ ಅಧಿಕಾರಿಗಳಿದ್ದರು.
--