

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
‘ನಾನು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಬೆನ್ನು ಬಿದ್ದಿದ್ದೇನೆ’,ಎಸಿಯಿಂದ ಕೇಂದ್ರ ಜಲಶಕ್ತಿ ಅಧಿಕಾರಿ,ಸಚಿವರವರೆಗೂ ಫಾ ಲೋ ಆಫ್ ಮಾಡುವ ಮೂಲಕ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮ ವಹಿಸುವುದಾಗಿ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದ ರು.
ನಗರದ ಭದ್ರಾಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಅವರು,ಯೋಜನೆಗೆ ಅ ನುದಾನ ಕೊರತೆ ಇದೆ. ಭೂ ಸ್ವಾಧೀನವೂ ಸಂಪೂರ್ಣವಾಗಿಲ್ಲ. ಚಿತ್ರದುರ್ಗ ಜಿಲ್ಲೆ ಎಲ್ಲ ಆರು ತಾಲೂಕುಗಳು, ತುಮಕೂರು ಜಿಲ್ಲೆ ಚಿಕ್ಕ ನಾಯಕನಹಳ್ಳಿ,ಶಿರಾ,ಪಾವಗಡ, ಚಿಕ್ಕಮಗಳೂರಿನ ತರೀಕೆರೆ, ಕಡೂರು ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ 2,25,515 ಹೆಕ್ಟೇರ್‌ಗೆ ಹನಿ ನೀರಾವರಿ ಒದಗಿಸುವ ಈ ಯೋಜನೆಗೆ ಅಗತ್ಯವಿರುವ 6806 ಎಕರೆಯಲ್ಲಿ ಈವರೆಗೆ 5038 ಎಕರೆ ಭೂಮಿ ಸ್ವಾಧೀನ ವಾಗಿದೆ. 1800 ಎಕರೆ ಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ. 2008ರಲ್ಲಿ 5900 ಕೋಟಿ ರೂ.ವೆಚ್ಚದೊಂದಿಗೆ ಆರಂಭವಾದ ಯೋಜನಾ ವೆಚ್ಚವನ್ನು 2020ರಲ್ಲಿ 21463 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಈವರೆಗೆ 10 ಸಾವಿರ ಕೋಟಿ ರೂ.ವೆಚ್ಚವಾಗಿದೆ. ಅಂದಾಜು 11500 ಕೋಟಿ ರೂ.ವೆಚ್ಚದ ಕಾಮಗಾರಿ ಬಾಕಿ ಇದೆ. ಗುತ್ತಿಗೆದಾರರ ಬಿಲ್ ಪಾವತಿಸಲು,ಭೂಸ್ವಾಧೀನಕ್ಕೂ ಅನುದಾನದ ಅಗತ್ಯವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2600 ಹಾಗೂ 3100 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ 1400 ಕೋ ಟಿ ರೂ.ಒದಗಿಸಿದ್ದು,3 ಸಾವಿರ ಕೋಟಿ ರೂ.ಬಿಡುಗಡೆಗೆ ಸಿಎಂ ಸಿದ್ದರಾ ಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರದ ವಿತ್ತ ಸಚಿವೆ ನಿರ್ಮಲಾಸೀತಾರಾಮ್ ಅವರು,ಕೇಂದ್ರ ಮಂಜೂರು ಮಾಡಿರುವ 5300 ಕೋಟಿ ರೂ.ಬಿಡುಗಡೆ ಭರವಸೆ ನೀಡಿದ್ದಾರೆ. ಕೇಂದ್ರದಿಂದ ಅನುದಾನ ಬಂದೇ ಬರುತ್ತದೆ.
ಭೂ ಸ್ವಾಧೀನ,ಫಾರೆಸ್ಟ್ ಕ್ಲಿಯರೆನ್ಸ್ ಮತ್ತಿತರ ಸಮಸ್ಯೆಗಳ ಇತ್ಯರ್ಥಕ್ಕೆ ಶೀಘ್ರದಲ್ಲೇ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳ ಗೊಂಡ ಸಮನ್ವಯ ಸಭೆ ನಡೆಸುವಂತೆ ರಾಜ್ಯಸರ್ಕಾರದ ಮುಖ್ಯಕಾರ‌್ಯದರ್ಶಿಗೆ ಕೋರಿದ್ದೇನೆ. ಕೇಂದ್ರ ಬಜೆಟ್ ಸಂದರ್ಭದಲ್ಲಿ ಕೇಂದ್ರದ ಜಲಶಕ್ತಿ ಸಚಿವರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಕೇಂದ್ರದಿಂದ ಅನುದಾನ ಬಿಡುಗಡೆಗೆ ಕೋರಿಕೆ ಸಲ್ಲಿಸಲಾಗುವುದು.
ಈ ವರ್ಷದ ಕೊನೆಯಲ್ಲಿ ಚಿತ್ರದುರ್ಗಕ್ಕೆ ಭದ್ರೆ ನೀರು ಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಬೇಕಿದ್ದು,ಯೋಜನೆ ಅನುಷ್ಠಾನಕ್ಕೆ ರೈತರ ಸಹ ಕಾರವೂ ಮುಖ್ಯವಾಗಿದೆ. ಪರಿಹಾರದ ವಿಚಾರದಲ್ಲಿ ಕೆಲವು ರೈತರು ಕೋರ್ಟಿಗೆ ಹೋಗಿದ್ದಾರೆ. ಕಾಯ್ದೆ ಅನುಸಾರ ಜಮೀನು ಮೌಲ್ಯದ 4 ಪಟ್ಟು ಹೆಚ್ಚು ಮೊತ್ತದ ಪರಿಹಾರ ಪಡೆಯಲು ಅವಕಾಶವಿದೆ. ಪರಿಹಾರ ಪಡೆಯಲು ರೈತರು ಹಿಂದೇಟು ಹಾಕಿದರೆ ಡಿಸಿ ಖಾತೆಯಲ್ಲಿ ಠೇವಣಿ ಇಟ್ಟು ಕಾಮಗಾರಿ ಮುಂದುವರಿಸುವಂತೆ ಸೂಚಿಸಿದ್ದೇನೆ.
ಚಿತ್ರದುರ್ಗ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಯೋಜನೆ ವರದಾನವಾಗಿದ್ದು,ಭೂಸ್ವಾಧೀನ ಪ್ರಕ್ರಿಯೆ ಚುರುಕಿಗೆ ಅಧಿಕಾ ರಿಗಳಿಗೆ ನಿರ್ದೇಶಿಸಿರುವುದಾಗಿ ಹೇಳಿದರು. ತುಂಗಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಟವರ್ ಅಳವಡಿಕೆ ಕಾಮಗಾರಿಗೆ ಅರಣ್ಯ ಇ ಲಾಖೆ ಅನುಮತಿ ಬೇಕಿದೆ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ,ಭದ್ರಾಮೇಲ್ದಂಡೆ ಯೋಜನೆ ಸಿಇ ಎಫ್.ಎಚ್.ಲಮಾಣಿ,ಎಸ್‌ಇಗಳಾದ ವಿ.ಕವಿತಾ,ಮಧುಕುಮಾರ್, ಇಇಗಳಾದ,ಕೆ.ಟಿ.ಹರೀಶ್,ಬಾರಿಕರ್‌ಚಂದ್ರಪ್ಪ,ಕೆ.ಬಿ.ರಾಮಚಂದ್ರಪ್ಪ,ರಾಜೇಶ್, ಹರ್ಷ,ಪ್ರಕಾಶ್,ಡಿಸಿಇ ಟಿ.ಎನ್.ಸೋಮಶೇಖರ್,ನಿವೃತ್ತ ಇಂಜಿನಿಯರ್ ಎಂ.ರವೀಂದ್ರಪ್ಪ ಮತ್ತಿತರರು ಇದ್ದರು.
ದೂರವಾಣಿ ಮೂಲಕ ಸಮಾಲೋಚನೆ
ಅಧಿಕಾರಿಗಳಿಂದ ಯೋಜನೆ ವಿವರ ಪಡೆದ ಸಂಸದರು,ರಾಜ್ಯಸರ್ಕಾರದ ಮುಖ್ಯಕಾರ‌್ಯದರ್ಶಿ,ಅರಣ್ಯ,ಕಂದಾಯ ಇಲಾಖೆ ಪ್ರಧಾನ ಕಾರ‌್ಯದರ್ಶಿಗಳು,ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸಮಸ್ಯೆಗಳ ಕುರಿತಂತೆ ಚ ರ್ಚಿಸಿ,ತ್ವರಿತ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿದರು.