ಶೀಘ್ರ ದಕ್ಕದು ಜಿಲ್ಲಾಡಳಿತ ಭವನ ?

CTD DC OFFCIE NEW -----
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಗರದೊಳಗೆ ಕಟ್ಟಬಹುದಾಗಿತ್ತು, ನಗರದಿಂದ ದೂರವಾಯಿತು, ಜನ ಸಾಮಾನ್ಯರಿಗೆ ಹೋಗಿ ಬರುವುದು ಕಷ್ಟ ಎಂಬ ಅಸಮಾಧಾನದ ಮಾತುಗಳ ನಡುವೆಯೇ ಚಿತ್ರದುರ್ಗದ ಕುಂಚಿಗನಾಳ್‌ನಲ್ಲಿ ಜಿಲ್ಲಾಡಳಿತ ಕಚೇರಿ ಸಂಕೀರ್ಣದ ಹೊಸ ಕಟ್ಟಡ ತಲೆ ಎತ್ತುತ್ತಿದೆ. ಆದರೆ ಮೂಲ ಸೌಕರ್ಯ ಒದಗಿಸಿ ಜನರ ಸೇವೆಗೆ ನೀಡಲು ಇನ್ನೂ ಒಂದು ವರ್ಷವಾದರೂ ಬೇಕೆನ್ನುವ ಮಾಹಿತಿ ತಿಳಿದು ಬಂದಿದೆ.

47.50 ಕೋಟಿ ರೂ. ಪರಿಷ್ಕೃತ ವೆಚ್ಚದೊಂದಿಗೆ 40 ಎಕರೆ ಪೈಕಿ, 2 ಎಕರೆ ವಿಸ್ತೀರ್ಣದಲ್ಲಿ 2022 ಸೆಪ್ಟೆಂಬರ್‌ನಲ್ಲಿ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ರಾಜ್ಯ ಸರ್ಕಾರ 2019 ರ ಅಕ್ಟೋಬರ್ 22 ರಂದು 25 ಕೋಟಿ ರೂ. ಬಿಡುಗಡೆ ಮಾಡಿತ್ತು. ಲೋಕೋಪಯೋಗಿ ಇಲಾಖೆಯ ಅಂದಿನ ಮುಖ್ಯ ಇಂಜಿನಿಯರ್ ಕಾಂತರಾಜ್ ಮತ್ತವರ ತಂಡ ಸ್ಥಳ ಪರಿಶೀಲನೆ ನಡೆಸಿ ಜಾಗ ಸಮತಟ್ಟುಗೊಳಿಸಲು ಸೂಚಿಸಿತ್ತು. 2025 ರ ಏಪ್ರಿಲ್‌ನೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.

ಹೊಸ ಕಟ್ಟಡಕ್ಕೆ ಸಂಪರ್ಕ ರಸ್ತೆ, ವಾಹನ ನಿಲುಗಡೆ, ಉದ್ಯಾನ, ಕ್ಯಾಂಟಿನ್, ಸಾರ್ವಜನಿಕ ಶೌಚಗೃಹ ಮತ್ತಿತರ ಮೂಲ ಸೌಕರ್ಯಗಳಿಗೆ ಇನ್ನೂ ಯೋಜನೆ ಸಿದ್ಧವಾಗಿಲ್ಲ. ಇದಕ್ಕಾಗಿ 10 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ.

ಇಲ್ಲಿ ಡಿಸಿ, ಎಡಿಸಿ, ಎನ್‌ಐಟಿ ಸಹಿತ ವಿವಿಧ ಇಲಾಖೆಗಳಿಗೆ ಸ್ಥಳಾವಕಾಶ ಸಿಗಲಿದೆ. 12 ರಿಂದ 13 ವಿಡಿಯೊ ಕಾನ್ಫರೆನ್ಸ್, 8 ಮೀಟಿಂಗ್ ಹಾಲ್ ಇರಲಿವೆ. 3 ಲಿಫ್ಟ್ ಅಳವಡಿಸಲಾಗುತ್ತಿದೆ. ಇದರ ಸಮೀಪದಲ್ಲೇ ಇವಿಎಂ ಉಗ್ರಾಣವಿದ್ದರೂ, ಹೊಸ ಕಟ್ಟಡದಲ್ಲೂ ಇವಿಎಂಗಳನ್ನಿಡಲು ಅವಕಾಶ ಮಾಡಿಕೊಳ್ಳಲಾಗಿದೆ.

-

ಕೋಟ್

ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಗುತ್ತಿಗೆದಾರ 2025 ರ ಏಪ್ರಿಲ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ರಸ್ತೆ ಮತ್ತಿತರ ಸೌಕರ್ಯಗಳಿಗೆ ಶೀಘ್ರದಲ್ಲೇ ಯೋಜನೆ ಸಿದ್ಧಪಡಿಸಿ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಸಿ. ಚಂದ್ರಪ್ಪ, ಎಇಇ, ಚಿತ್ರದುರ್ಗ, ಲೋಕೋಪಯೋಗಿ ಇಲಾಖೆ, ಚಿತ್ರದುರ್ಗ.(ಚಂದ್ರಪ್ಪ ಮಗ್ ಶಾಟ್)

---

ರಿವೈಸ್ ಎಸ್ಟಿಮೇಟ್‌ಗೆ ಒಪ್ಪಿಗೆ ಕಷ್ಟ

ಇನ್ನೂ ಆರೇಳು ತಿಂಗಳ ಒಳಗೆ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ನಾನು ಕೂಡ ಕಾಲ, ಕಾಲಕ್ಕೆ ಸ್ಥಳಕ್ಕೆ ತೆರಳಿ ಪ್ರಗತಿ ಪರಿಶೀಲಿಸುತ್ತಿದ್ದೇನೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮೂಲಸೌಕರ್ಯಗಳಿಗೆ ರಿವೈಸ್ ಎಸ್ಟಿಮೇಟ್ ಕಳಿಸಬೇಕಿದೆ. ಆದರೆ, 25 ಕೋಟಿ ರೂ. ಇದ್ದ ಮುಖ್ಯ ಕಟ್ಟಡದ ಎಸ್ಟಿಮೇಟ್ ಅನ್ನು ಈಗಾಗಲೇ ಪರಿಷ್ಕರಿಸಲಾಗಿದೆ. ಆದ್ದರಿಂದ ಸರ್ಕಾರ ಮತ್ತೆ ಅನುದಾನ ಮಂಜೂರು ಮಾಡುವುದು ಅನುಮಾನ. ಆದರೂ, ಪ್ರಸ್ತಾವನೆ ಸಲ್ಲಿಸಲಾಗುವುದು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೂ ತಂದಿದ್ದೇನೆ. ಇತರೆ ಮೂಲಗಳಿಂದಲೂ ಅನುದಾನ ಹೊಂದಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net