ಶೀಘ್ರ ಕಾಮಗಾರಿ ಪೂರ್ಣಗೊಳಿಸಿ

8SNK1
Published on

ಸಂಕೇಶ್ವರ: ಟೆಂಡರ್‌ದಾರರು ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಸೂಚಿಸಿದರು.

ಸ್ಥಳೀಯ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಸಂಕೇಶ್ವರ ಕಾರ್ಖಾನೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಮಳೆಗಾಲದಲ್ಲಿ ಆಫೀಸ್ ಕಟ್ಟಡಗಳ ಸೋರಿಕೆಯಿಂದ ನೌಕರರಿಗೆ ಕೆಲಸದ ತೊಂದರೆಯಾಗಿರುವುದನ್ನು ಹೋಗಲಾಡಿಸಲು ವಾಟರ್‌ಫ್ರುಪಿಂಗ್ ಮತ್ತು ರಿಪೇರಿ, ಕಾರ್ಖಾನೆ ಕಾಲನಿ ನಿವಾಸಿಗಳಿಗೆ ನೀರು ಪೂರೈಸಲು ಹೊಸ ಪೈಪ್‌ಲೈನ್ ಅಳವಡಿಕೆ, ಕಾರ್ಖಾನೆ ಆವರಣದಲ್ಲಿ ಬೀಳುವ ಅವಸ್ಥೆಯಲ್ಲಿರುವ ಅತಿಥಿಗೃಹ ನವೀಕರಣ, ಕೂಲಿಂಗ್ ಟಾವರ್ ಬಸ್ ವಾಟರ್ ಪ್ರುಪಿಂಗ್ ಹಾಗೂ ಡಬ್ಲ್ಯೂಪಿಸಿ ಪ್ಲಾಸ್ಟರ್ ವರ್ಕ್ ಮತ್ತು ಸ್ಪೇರ್‌ಫಾಂಡ್ ಮತ್ತು ಚನಲ್‌ಗಳ ವಾಟರ್ ಪ್ರುಪಿಂಗ್ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದರು. ಈಗಾಗಲೇ ಕಾರ್ಖಾನೆ ಮಾರ್ಗದರ್ಶಕರಾದ ಅಣ್ಣಾಸಾಹೇಬ ಜೊಲ್ಲೆ ನಿರ್ದೇಶನದಂತೆ ಆಡಳಿತ ಮಂಡಳಿ ಕಾಯಂ ಹಾಗೂ ಹಂಗಾಮಿ ನೌಕರರಿಗೆ ೭ನೇ ವೇತನ ಜಾರಿಗೊಳಿಸಲು ನಿರ್ಧರಿಸಿದ್ದು, ಕಾರ್ಮಿಕ ದಿನದಂದು ಜೊಲ್ಲೆ ದಂಪತಿ ಕಾರ್ಮಿಕರ ಪಾದಪೂಜೆ ಮಾಡಿರುವುದೇ ಸಾಕ್ಷಿ ಎಂದರು.

ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಸಂಚಾಲಕ ಅಪ್ಪಾಸಾಹೇಬ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವೀರಣಗೌಡ ದೇಸಾಯಿ, ಆಡಳಿತಾಽಕಾರಿ

ರವೀಂದ್ರ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net