ಶಿಸ್ತುಬದ್ಧ ಕವಾಯತಿಗೆ 11ರಿಂದ ಪೂರ್ವಾಭ್ಯಾಸ,ಎಸ್‌ಪಿ

CTD SP--0002
Published on

ಚಿತ್ರದುರ್ಗ:ಸ್ವಾತ್ಯಂತ್ರ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಗಸ್ಟ್ 11 ರಿಂದ 13ರವರೆಗೆ ಪಥ ಸಂಚಲನದ ಕವಾಯತು ಪೂರ್ವಾಭ್ಯಾಸ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕು ಮಾರ್‌ಮೀನಾ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾತ್ಯಂತ್ರೋತ್ಸವದ ಪರೇಡ್ ಉಪ ಸಮಿತಿ ಸಭೆಯಲ್ಲಿ ಮಾತನಾಡಿದ ಅ ವರು, ಈ ಪೂರ್ವಾಭ್ಯಾಸದಲ್ಲಿ ಪೊಲೀಸ್,ಗೃಹ ರಕ್ಷಕ,ಅರಣ್ಯ ಹಾಗೂ ಅಬಕಾರಿ ಇಲಾಖೆಗಳ ಜತೆ ಎನ್‌ಸಿಸಿ,ಸ್ಕೌಟ್ಸ್ ಮತ್ತು ಗೈಡ್ಸ್ ಹಾ ಗೂ ನಗರದ ಶಾಲಾ,ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. 11ರಿಂದ ನಿತ್ಯ ಬೆಳಗ್ಗೆ 6.30ಕ್ಕೆ ಕವಾಯತು ಅಭ್ಯಾಸ ಪ್ರಾರಂಭ ವಾಗುವುದು.ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳನ್ನು ಜಾಗರೂಕತೆಯಿಂದ ಪೂರ್ವಾಭ್ಯಾಸಕ್ಕೆ ಕರೆ ತರಬೇಕೆಂದರು.
ಕನ್ನಡದಲ್ಲಿ ಪಥಸಂಚಲನದ ಆಜ್ಞೆ
ಸ್ವಾತಂತ್ರೋತ್ಸವದ ಪಥ ಸಂಚಲನದ ಆಜ್ಞೆಗಳನ್ನು ಕನ್ನಡದಲ್ಲೇ ನೀಡಲಾಗುವುದು ಎಂದು ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಹೇಳಿ ದರು. ವಾಟ್ಸ್‌ಪ್ ಗ್ರೂಫ್‌ಲ್ಲಿ ಕನ್ನಡದ ಆಜ್ಞೆಗಳ ಮಾದರಿ ಹಂಚಿಕೊಳ್ಳಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರು ನಿತ್ಯ ಕನ್ನಡದಲ್ಲೇ ಆಜ್ಞೆ ನೀಡಿ ಪಥ ಸಂಚಲನದ ವಿದ್ಯಾರ್ಥಿಗಳನ್ನು ಪೂರ್ವಾಭ್ಯಾಸಕ್ಕೆ ಸಜ್ಜುಗೊಳಿಸಬೇಕೆಂದರು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾ ಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆ ಡಿವೈಎಸ್‌ಪಿ ಎಸ್.ಎಸ್.ಗಣೇಶ್,ಜಿಲ್ಲಾ ದೈಹಿಕಶಿಕ್ಷಣಾಧಿಕಾರಿ ಚಿದಾನಂದ,ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಪಿ.ಕೆ.ಸಂಧ್ಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net