ಶಿಸ್ತುಪಾಲನೆಗೆ ಅಧಿಕಾರಿಗಳಿಗೆ ಎಸ್‌ಪಿ ಖಡಕ್ ಸೂಚನೆ

CTD 26 NEW SP---03
Published on

ಚಿತ್ರದುರ್ಗ: ಧರ್ಮೇಂದ್ರಕುಮಾರ್ ಮೀನಾ ಅವರು ಜಿಲ್ಲೆಯ 55ನೇ ಎಸ್‌ಪಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್‌ಪಿ ಕೆ.ಪರಶುರಾಮ ಅವರು ಮೀನಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ರಾಜಸ್ತಾನ ಡೌಸ ಜಿಲ್ಲೆಯ ಮೀನಾ ಅವರು 2012ರ ಬ್ಯಾಚ್ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಧಾರವಾಡ ಹಾ ಗೂ ಚಾಮರಾಜನಗರ ಜಿಲ್ಲೆಗಳ ರಕ್ಷಣಾಧಿಕಾರಿಯಾಗಿ,ಬೆಂಗಳೂರು ನಾರ್ಥ್ ಡಿಸಿಪಿ ಹಾಗೂ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲ ಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಐಪಿಎಸ್ ಪಾಸಾಗುವ ಮೊದಲ ಮೀನಾ ಅವರು ರೂರ್ಕಿ ಐಐಟಿಯಲ್ಲಿ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರ್ ಪ ದವಿ ಪಡೆದಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಕಾನೂನು-ಸುವ್ಯವಸ್ಥೆಗೆ ಎಲ್ಲೂ ಧಕ್ಕೆ ಆಗದಂತೆ ಶೀಘ್ರ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದೂರುಗಳು ಯಾವುದೇ ಇರಲಿ ಕೂಡಲೇ ದೂರುದಾರರಿಗೆ ಸ್ಪಂದಿಸಬೇಕು.ಇದರಲ್ಲಿ ಯಾವುದೇ ಉದಾಸೀನ ತೊರೆಯದಂತೆ ಎಚ್ಚರಿಸಿದರು. ಕೇಂದ್ರಸ್ಥಾನವನ್ನು ವಿನಾಕಾರಣ ಬಿಡಬಾರದು. ಇಲಾಖೆಯಲ್ಲಿ ಶಿಸ್ತು ಮುಖ್ಯ. ಶಿಸ್ತುಪಾಲನೆಯಲ್ಲಿ ನಿರ್ಲಕ್ಷೃ ಬೇಡ. ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳ ಬೇಕು. ಕಾನೂನು-ಸುವ್ಯವಸ್ಥೆ ರಕ್ಷಣೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net