ಶಿಸ್ತು, ಸಂಸ್ಕಾರ ಕಲಿಸಲಿ

15Ainapur1
Published on

ಐನಾಪುರ: ಅಕ್ಷರ ಕಲಿಯುವುದಷ್ಟೇ ಶಿಕ್ಷಣವಲ್ಲ, ಶಿಸ್ತು ಮತ್ತು ಸಂಸ್ಕಾರ ಕಲಿಯುವುದು ನಿಜವಾದ ಶಿಕ್ಷಣ ಎಂದು ಕಾಗವಾಡ ತಹಸೀಲ್ದಾರ್ ರಾಜೇಶ ಬುರ್ಲಿ ಹೇಳಿದರು.

ಪಟ್ಟಣದ ಶಾಂತಿಸಾಗರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಅಕ್ಷರ ಕಲಿತವರು ಭವಿಷ್ಯ ರೂಪಿಸಿಕೊಂಡರೆ, ಶಿಸ್ತು ಮತ್ತು ಸಂಸ್ಕಾರ ರೂಢಿಸಿಕೊಂಡವರು ಭವಿಷ್ಯದ ಜತೆ ಇತರರಿಗೆ ಆದರ್ಶರಾಗುತ್ತಾರೆ ಎಂದರು.

ಅರುಣ ಗಾಣಿಗೇರ ಮಾತನಾಡಿ, ನಿರ್ದಿಷ್ಟ ಗುರಿ ಇದ್ದರೆ ಸಾಧನೆ ಸಾಧ್ಯ. ಮೊಬೈಲ್ ನೀಡುತ್ತಿರುವುದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ವಿಷಾದಿದರು.

ಡಾ.ವಿಜಯ ಮುತಾಲಿಕ, ಡಾ.ರಾಜೇಂದ್ರ ಗಣಿ, ಪಪಂ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅರುಣ ಗಾಣಿಗೇರ, ಉಪಾಧ್ಯಕ್ಷ ಪಾಯಪ್ಪ ಕುಡವಕ್ಕಲಗಿ, ಕಾರ್ಯದರ್ಶಿ ಅನುಪ ಶೆಟ್ಟಿ, ಸುರೇಶ ಗಾಣಿಗೇರ, ಸಿದ್ದು ಖಟಾಂವಿ, ಅಪ್ಪಾಸಾಹೇಬ ಚೌಗಲಾ, ಡಾ.ಆನಂದ ಕಟ್ಟಿ, ಬಾಳಾಸಾಹೇಬ ದಾನೊಳ್ಳಿ, ಶಿವಾನಂದ ಕಮತಗಿ, ರಾಮು ಪಾವಲಿ, ಕಾಳಪ್ಪ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net