ಶಿಸ್ತು, ಸಂಯಮವಿದ್ದರೆ ಯಶಸ್ಸು ತಾನಾಗೆ ಹುಡುಕಿಕೊಂಡು ಬರುತ್ತದೆ: ಡಾ.ಚಂದ್ರಮೌಳಿ

ಶಿಸ್ತು, ಸಂಯಮವಿದ್ದರೆ ಯಶಸ್ಸು ತಾನಾಗೆ ಹುಡುಕಿಕೊಂಡು ಬರುತ್ತದೆ: ಡಾ.ಚಂದ್ರಮೌಳಿ
Published on

ಬೇಲೂರು: ನಾವುಗಳು ಮಾಡುವ ಕೆಲಸದಲ್ಲಿ ಶಿಸ್ತು, ಸಂಯಮವಿದ್ದರೆ ಯಶಸ್ಸು ತಾನಾಗೆ ಹುಡುಕಿಕೊಂಡು ಬರುತ್ತದೆ ಎಂದು ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ ಹೇಳಿದರು.


ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ, ಸ್ಕೌಟ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆ ಉದ್ಘಾಟನೆ ಮತ್ತು ವೈಡಿಡಿ ವ?ರ್ದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಾಗಿದ್ದಾಗಿನ ಜೀವನ ನಮ್ಮ ಜೀವನದ ಮುಖ್ಯ ಘಟವಾಗಿದೆ. ಈ ಸಮಯವನ್ನು ನೀವುಗಳು ವ್ಯರ್ಥ ಮಾಡದೇ ಕಠಿಣ ಪರಿಶ್ರಮ, ಶಿಸ್ತು, ಸಂಯಮದಿಂದ ವಿದ್ಯಾಭ್ಯಾಸ ಮಾಡಬೇಕು. ಹಾಗ ಮಾತ್ರ ಮುಂದಿನ ದಿನಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ.. ಆದ್ದರಿಂದ ವಿದ್ಯಾರ್ಥಿಗಳಾದ ನೀವು ಗುರು ಹಿರಿಯರನ್ನು ಗೌರವಿಸಿ ದೇಶದ ಉತ್ತಮ ಪ್ರಜೆಯಾಗಿ ಕೊಡುಗೆ ನೀಡಬೇಕು ಎಂದರು.


ಹಾಸನದ ಎವಿಕೆ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸೀ.ಚಿ.ಯತೀಶ್ವರ್ ಮಾತನಾಡಿ, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಸಹ ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಗೆ ಪೂರಕವಾಗುತ್ತವೆ. ಶಾಲಾ ಹಂತದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಬಹುತೇಕ ವಿದ್ಯಾರ್ಥಿಗಳು, ಕಾಲೇಜು ಹಂತದಲ್ಲಿ ಕ್ರೀಡೆಯಿಂದ ಹೊರ ಬರುವ ಸನ್ನಿವೇಶಗಳು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿದೆ, ಈ ಬೆಳೆವಣಿಗೆಯಿಂದ ವಿದ್ಯಾರ್ಥಿಯ ಸದೃಢತೆಗೆ ತೀವ್ರ ಹಿನ್ನಡೆಯಾಗುವುದರಿಂದ ವಿದ್ಯಾರ್ಥಿಗಳಾದ ನೀವು ಏಕಾಗ್ರತೆ, ಶಿಸ್ತು ಅಳವಡಿಸಿಕೊಳ್ಳಬೇಕೆಂದರು.


ವೈಡಿಡಿ ಕಾಲೇಜು ಪ್ರಾಂಶುಪಾಲ ಎನ್.ಪುಟ್ಟರಾಜು, ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ಎಚ್.ಮಹೇಶ್, ಮ.ಶಿವಮೂರ್ತಿ, ಸುರೇಶ್, ಸತೀಶಗೌಡ, ಸೌಮ್ಯ, ಅಧೀಕ್ಷಕ ಕೇಶವಕಿರಣ್, ಉಪನ್ಯಾಸಕರಾದ ಲೋಕೇಶ್, ರಾಘವೇಂದ್ರ, ಮೋಹನಕುಮಾರ್, ವೀರಭದ್ರಪ್ಪ, ರತ್ನವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net