ಶಿಸ್ತು ಮೈಗೂಡಿಸಿಕೊಂಡರೆ ಸಾಧನೆ

150Klb04
Published on

ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರತಿಭೆ, ವಿಶೇಷವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯವೂ ಪ್ರೇರಣಾದಾಯಕ ಎಂದು ಪತಂಜಲಿ ಯೋಗ ಸಮಿತಿ ಯೋಗ ಗುರು ಶಿವಾನಂದ ಸಾಲಿಮಠ ಹೇಳಿದರು.

ನಂದಿಕೂರ ಗ್ರಾಮದಲ್ಲಿ ಇತ್ತೀಚೆಗೆ ಬುದ್ಧ ಪೂರ್ಣಿಮಾ ನಿಮಿತ್ತ ಆಯೋಜಿಸಿದ್ದ ಪ್ರತಿಭೆಗಳು, ಪ್ರೋತ್ಸಾಹ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡರೆ ಸಾಧನೆ ಸಾಧ್ಯವಾಗಲಿದೆ. ಭವಿಷ್ಯ ಉಜ್ವಲವಾಗಲಿದೆ ಎಂದರು.

ಕಾಂಗ್ರೆಸ್​ ಮುಖಂಡ ಪವನಕುಮಾರ ವಳಕೇರಿ ಮಾತನಾಡಿ, ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಇತರರಿಗೆ ಪ್ರೇರಣೆ ನೀಡುತ್ತದೆ ಎಂದರು.

ಯೋಗ ಗುರು ಸುಭಾಶ್ಚಂದ್ರ, ನಂದಿಕೂರ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಸೀತನೂರ, ಮಲ್ಲಣಗೌಡ ನಂದಿಕೂರ, ವಿಎಸ್​ಎಸ್​ಎಸ್​ಎನ್​ ಅಧ್ಯಕ್ಷ ಮಲ್ಲಿನಾಥ ನಾಗನಳ್ಳಿ, ಲಕ್ಷ$್ಮಣ ಪೂಜಾರಿ, ಸಂಗಣ್ಣಗೌಡ ಸೀತನೂರ, ಸಿ.ಓವೆಂಕಟಗಿರಿ, ವಿಠಾಬಾಯಿ ಇತರರಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಅನಿತಾ ವಳಕೇರಿ ಸ್ವಾಗತಿಸಿದರು. ಸಂದ್ಯಾ ವಳಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net