ಶಿಷ್ಟಾಚಾರ ಉಲ್ಲಂಘನೆ ಅಧಿಕಾರಿಗಳ ವಿರುದ್ಧ ಕ್ರಮ ಆಗ್ರಹ

25 HBD 1
 ಶಿಷ್ಟಾಚಾರ ಉಲ್ಲಂಘನೆ ಮಾಡಿ ಶಾಸಕರ ತೇಜೋವಧೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ಹುಮನಾಬಾದ್‌ನಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಎಸಿ ಮುಕುಂದ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಕ್ಷ  ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮುಖಂಡರಾದ ಬಸವರಾಜ ಆರ್ಯ, ಮಲ್ಲಿಕಾರ್ಜುನ ಪಾಟೀಲ್, ವಿಶ್ವನಾಥ ಪಾಟೀಲ್, ಸಂತೋಷ ಪಾಟೀಲ್, ಅಭಿಮನ್ಯು ನಿರಗುಡಿ, ಮಲ್ಲಿಕಾರ್ಜುನ ಸೀಗಿ, ಅನಿಲ ಪಸರಗಿ, ನಾಗಭೂಷಣ ಸಂಗಮ, ಗೋಪಾಲಕೃಷ್ಣ ಮೋಹಳೆ, ರಮೇಶ ಕಲ್ಲೂರ ಇತರರಿದ್ದರು.
Published on

ಹುಮನಾಬಾದ್: ಶಿಷ್ಟಾಚಾರ ಉಲ್ಲಂಘನೆ ಮಾಡಿ ಶಾಸಕರ ತೇಜೋವಧೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಬಸವೇಶ್ವರ ವೃತ್ತದಿಂದ ಬಾಲಾಜಿ, ಸರ್ದಾರ್ ಪಟೇಲ್ ವೃತ್ತ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೆಲಕಾಲ ರಸ್ತೆತಡೆ ನಡೆಸಲಾಯಿತು.

ಪಲ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ತಾಲೂಕು ಅಧ್ಯಕ್ಷ ಅನಿಲ ಪಸರಗಿ, ಮುಖಂಡರಾದ ಬಸವರಾಜ ಆರ್ಯ, ನಾಗಭೂಷಣ ಸಂಗಮ, ಗೌತಮ ಸೇಡೋಳ ಮತ್ತಿತರರು ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡಬೇಕಾದ ಅಧಿಕಾರಿಗಳೇ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಇದು ಹೀಗೆ ಮುಂದುವರೆದರೆ ಅಧಿಕಾರಿಗಳ ಮನೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಸಿಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯೊಂದಿಗೆ ಶಾಸಕರ ತೇಜೋವಧೆ ಮಾಡಿದ ಅಧಿಕಾರಿಗಳ ವಿರುದ್ಧ ಶೀಘ್ರಕ್ರಮ ಕೈಗೊಳ್ಳಬೇಕು. ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಂದ ಜೈನ್ ಅವರಿಗೆ ಸಲ್ಲಿಸಲಾಯಿತು.

ಪಕ್ಷದ ಮುಖಂಡರಾದ ಮಲ್ಲಿರ್ಕಾಜುನ ಪಾಟೀಲ್, ವಿಶ್ವನಾಥ ಪಾಟೀಲ್ ಮಾಡಗೂಳ, ಸಂತೋಷ ಪಾಟೀಲ್, ಅಭಿಮನ್ಯು ನಿರಗುಡೆ, ರಮೇಶ ಕಲ್ಲೂರ, ನಾರಾಯಣ ರಾಂಪುರೆ, ಮಲ್ಲಿಕಾರ್ಜುನ ಸೀಗಿ, ವಿಜಯಕುಮಾರ ದುರ್ಗದ, ಗೋಪಾಲಕೃಷ್ಣ ಮೋಹಳೆ, ರವಿ ಹೊಸಳ್ಳಿ, ಭದ್ರೇಶ ಪಾಟೀಲ್, ಶಾಂತಾ ಆನಂದರಾಜು, ಧನಲಕ್ಷ್ಮೀ, ನಾಗೇಶ್ವರಿ ಕುಂಬಾರ, ಜ್ಞಾನದೇವ ಧುಮಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net