ಶಿಶುಮರಣ ತಡೆಗೆ ತಾಯಿ ಎದೆಹಾಲು ದಿವ್ಯೌಷಧ

ವಿಶ್ವ ಸ್ತನ್ಯಪಾನ ಸಪ್ತಾಹ
Published on

ಸುಂಟಿಕೊಪ್ಪ : ಶಿಶು ಜನಿಸಿದ ಅರ್ಧ ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದರಿಂದ ಶಿಶು ಮರಣವನ್ನು ತಪ್ಪಿಸಬಹುದು. ಇದು ಒಂದು ದಿವ್ಯೌಷಧ ಎಂದು ಕೊಡಗರಹಳ್ಳಿ ಆರೋಗ್ಯ ಕಾರ್ಯಕರ್ತೆ ಲತಾ ಕುಮಾರಿ ಹೇಳಿದರು.

ಕೊಡಗರಹಳ್ಳಿ ಅಂಗನವಾಡಿ ಕೇಂದ್ರ ಮತ್ತು ಕೊಡಗರಹಳ್ಳಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಯಿಯ ಎದೆಹಾಲು ಅಮೃತಕ್ಕೆ ಸಮ. ಮಗುವಿನ ಬೆಳವಣಿಗೆಗೆ ಇದುವೇ ಭದ್ರಬುನಾದಿ. ತಾಯಿ ಎದೆಹಾಲಿನಂತಹ ಪೋಷಕಾಂಶ ಹೊಂದಿರುವ ಆಹಾರ ಭೂಮಿಯ ಮೇಲೆ ಮತ್ತೊಂದಿಲ್ಲ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ನೀತಾ ಹರೀಶ್ ಮಾತನಾಡಿ, ಎದೆಹಾಲು ನೀಡುವುದು ಪ್ರತಿ ಮಾತೆಯರ ಆದ್ಯ ಕರ್ತವ್ಯ. ತಾಯಿ ಎದೆಹಾಲನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಎದೆಹಾಲು ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಸ್ತನ್ಯಪಾನ ಪಾನವನ್ನು ನೀಡುವುದ್ದರಿಂದ ಶಿಶುವು ಸದೃಢ ಆರೋಗ್ಯವಂತ ಶಿಶುವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕವಿತಾ, ಸದಸ್ಯೆ ಚೆನ್ನಬಸವಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಟಿ.ಎಲ್.ಸುಮಾ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಟೆನ್ನಿ ಥೋಮಸ್, ಅಂಗನವಾಡಿ ಕಾರ್ಯಕರ್ತೆ ಎಸ್.ಎನ್.ಸಾವಿತ್ರಿ, ಆಶಾ ಕಾರ್ಯಕರ್ತೆ ಆರ್.ಕವಿತಾ ಎಂ.ಪಿ.ಗೀತಾ, ಅಂಗನವಾಡಿ ಸಹಾಯಕಿ ಸಂಧ್ಯಾ ಉಪಸ್ಥಿತರಿದ್ದರು.

ಚಿತ್ರ.2:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net