ಶಿಶುಪಾಲನಶ ಕೇಂದ್ರಕ್ಕೆ ಸಿಇಒ ಭೇಟಿ

0708-Kpl-Ravi-5
Published on

ಕೊಪ್ಪಳ: ತಾಲೂಕಿನ ಹೊಸಳ್ಳಿ, ಮುನಿರಾಬಾದ್ ಡ್ಯಾಂ ಗ್ರಾಪಂಗಳಿಗೆ ಸೋಮವಾರ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ಕೇಂದ್ರಗಳಲ್ಲಿ ಶೌಚಗೃಹ, ವಿದ್ಯುತ್ ಸಂಪರ್ಖ, ಆಟಿಕೆ ಸಾಮಗ್ರಿ ಅಳವಡಿಸಿ. ಉತ್ತಮ ಗಾಳಿ, ಬೆಳಕು ಬರುವಂತೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ ತೆರಳಿ ಅಡುಗೆ ಕೋಣೆ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಪುಸ್ತಕ ಪರಿಶೀಲಿಸಿದರು. ಮಕ್ಕಳ ಆರೋಗ್ಯ ಪರೀಕ್ಷೆ ವೇಳೆ ಆಯಾ ವಾರ್ಡ್ ಸದಸ್ಯರನ್ನು ಕರೆಸುವಂತೆ ತಿಳಿಸಿದರು. ತಾಪಂ ಇಒ ದುಂಡಪ್ಪ ತುರಾದಿ, ಪಿಡಿಒಗಳಾದ ವೀರೇಶ, ಮಹೇಶ ಸಜ್ಜನ್,ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net