ಶಿಶುನಾಳ ಶರೀಫರ ಅಧ್ಯಯನ ಕೇಂದ್ರ ಸ್ಥಾಪಿಸಿ

IMG-20241215-WA0007
Published on

ಚಾಮರಾಜನಗರ: ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ ಸಂತ ಶಿಶುನಾಳ ಶರೀಫರ ಅಧ್ಯಯನ ಕೇಂದ್ರ ಸ್ಥಾಪಿಸಬೇಕೆಂದು ಎಂದು  ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಒತ್ತಾಯಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 41ನೇ  ದಿನದ ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫರ ಕುರಿತು ಮಾತನಾಡಿದರು.

ಕರ್ನಾಟಕ ಶರಣರು, ದಾಸರು, ತತ್ವಪದಕಾರರು ಹಾಗೂ ಸರ್ವಧರ್ಮಿಯರು ಬದುಕಿ ಬಾಳಿದ ನಾಡು. ಅವರು  ತಮ್ಮ ಬದುಕು, ಚಿಂತನೆ, ಸಾಹಿತ್ಯಗಳಿಂದ ಜನರ ಮೇಲೆ ಅಪಾರ ಪ್ರಭಾವ ಬೀರಿದರು. ಅವರಲ್ಲಿ 19ನೆಯ ಶತಮಾನದ ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು ಪ್ರಮುಖರು. ಅವರಿಬ್ಬರ ಬದುಕು ಹಾಗೂ ಅವರ ತತ್ವಪದಗಳೂ, ಧಾರ್ಮಿಕ ಭಾವೈಕ್ಯತೆ, ಸಾಮರಸ್ಯದ ಸಮಾನತೆಗೆ ಅಪೂರ್ವ ನಿದರ್ಶನಗಳಾಗಿವೆ ಎಂದರು.

ಸಂತ ಶಿಶುನಾಳ ಶರೀಫರ  ಗುರು ಗೋವಿಂದ ಭಟ್ಟರ ಶಿಷ್ಯರಾಗಿದ್ದು  ಸಾವಿರಾರು ಗೀತೆಗಳನ್ನು ರಚಿಸಿ ನಾಡು, ನುಡಿಗೆ ಅವಿಸ್ಮರಣೀಯ  ಕೊಡುಗೆ ನೀಡಿದ್ದಾರೆ ಎಂದರು. ಶಿಶುನಾಳ ಶರೀಪರು ಸತ್ಯದ ಹಾದಿಯಲ್ಲಿ ಸಾಗಿ ಇತರರಿಗೆ ಮಾದರಿ ಆಗಿದ್ದಾರೆ ಅವರು ರಚಿಸಿರುವ ಗೀತೆಗಳು ಅಜರಾಮರವಾಗಿ ಉಳಿಯಲು ನಾಡಿನ ಉದ್ದಗಲಕ್ಕೂ ಪರಿಚಯಿಸಿದ ಕೀರ್ತಿ ಗಾನ ಗಾರುಡಿಗ ಅಶ್ವಥ್ ಅವರಿಗೆ ಸಲ್ಲುತ್ತದೆ. ಅವರು ರಚಿಸಿದ ಗೀತೆಗಳಲ್ಲಿ ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಕೊಡುಗನ ಕೋಳಿ ನುಂಗಿತ್ತಾ, ಬಿದಿರು ನನರಿಗಲ್ಲದವಳು, ಹಾಕಿದ ಜಾನಿವಾರವ, ಮೋಹದ ಹೆಂಡತಿ ತಿರಿದ ಬಳಿಕ, ಯಾಕೀ ಬಡಿದಾಡುತ್ತಿಯಾ ತಮ್ಮ ಸೇರಿದಂತೆ ಅನೇಕ ಗೀತೆ ಸಮಾಜಕ್ಕೆ ಉತ್ತಮ ಸಂದೇಶ ಸಾರಿವೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.

ಬರಹಗಾರ ಲಕ್ಷ್ಮೀನರಸಿಂಹ, ರವಿಚಂದ್ರಪ್ರಸಾದ್ ಕಹಳೆ ಮಾತನಾಡಿದರು. ಕಾರ್ಯಕ್ರಮದಲ್ಲಿ  ಪಣ್ಯದಹುಂಡಿ ರಾಜು, ಶಿವಲಿಂಗಮೂರ್ತಿ, ಅಶ್ವಥ್ ನಾರಾಯಣ್, ಚಾ.ವೆಂ.ರಾಜ್ ಗೋಪಾಲ್, ಬಸವರಾಜು ನಾಯಕ, ಪದ್ಮಪುರುಷೋತ್ತಮ್, ನಿಜಧ್ವನಿಗೋವಿಂದ, ಮುತ್ತುರಾಜ್ , ರಾಚಪ್ಪ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net