ಶಿವಾನಂದಪುರಿ ಸ್ವಾಮೀಜಿಗೆ ಆಹ್ವಾನ

31-kkr5(10-24
ಕಿಕ್ಕೇರಿ ಸಮೀಪದ ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಆಯೋಜಿಸಿರುವ ಸರ್ವಧರ್ಮ ಸಮ್ಮೇಳನಕ್ಕೆ ಶಿವಾನಂದಪುರಿ ಸ್ವಾಮೀಜಿ ಅವರನ್ನು ಮಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಗುರುವಾರ ಆಹ್ವಾನಿಸಿದರು. ಮಠದ ಸದ್ಭಕ್ತರು ಇದ್ದರು.
Published on

ಕಿಕ್ಕೇರಿ: ಸಮೀಪದ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದಲ್ಲಿ ಮಠ ಹಾಗೂ ದೇವಾಲಯವು ಆರಂಭವಾಗಿ 10 ವರ್ಷಗಳು ಸಂಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ. 14 ಹಾಗೂ 15ರಂದು ಸರ್ವಧರ್ಮ ಸಮ್ಮೇಳನ, ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಇದರ ಸಾನ್ನಿಧ್ಯವಹಿಸಲು ಕಾಗಿನೆಲೆಯ ಕನಕಗುರು ಪೀಠದ ಕೆ.ಆರ್. ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿಯನ್ನು ಪಂಚಭೂತೇಶ್ವರ ಪೀಠದ ರುದ್ರಮುನಿ ಸ್ವಾಮೀಜಿ ಗುರುವಾರ ಫಲ ತಾಂಬೂಲ ನೀಡಿ ಆಹ್ವಾನಿಸಿದರು.

ಶ್ರೀ ಕ್ಷೇತ್ರದಲ್ಲಿ ದಶಮಾನೋತ್ಸವದ ಅಂಗವಾಗಿ ನಡೆಯಲಿರುವ ಸರ್ವ ಧರ್ಮ ಸಮ್ಮೇಳನ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಸದ್ಭಕ್ತರಲ್ಲಿ ಮತ್ತಷ್ಟು ಧಾರ್ಮಿಕ ಭಾವನೆ ಮೂಡಿ, ಯುವಕರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಏರ್ಪಡಿಸಲಾಗಿದೆ. ಈ ಸಭೆ ಭಾಗವಹಿಸಿ ಆಶೀರ್ವಚನ ನೀಡುವಂತೆ ಮನವಿ ಮಾಡಿದರು.

ಬೆಡದಹಳ್ಳಿ ಪಂಚಭೂತೇಶ್ವರ ಮಠ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಸಂಚಾಲಕ ಕಾಡುಮೆಣಸ ಚಂದ್ರು, ಕೆ.ಆರ್. ನೀಲಕಂಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net