ಶಿವಾಜಿ ಹೊಂದಿದ್ದ ಹೋರಾಟ ಮನೋಭಾವ ಯುವಕರಿಗೆ ಸ್ಪೂರ್ತಿ: ರುದ್ರೇಶ್

ಶಿವಾಜಿ ಹೊಂದಿದ್ದ ಹೋರಾಟ ಮನೋಭಾವ ಯುವಕರಿಗೆ ಸ್ಪೂರ್ತಿ: ರುದ್ರೇಶ್
Published on

ಆಲೂರು:  ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ಧೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿದಾಯಕ ವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್ ತಿಳಿಸಿದರು.

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಚತ್ರಪದಿ ಶಿವಾಜಿ ಮಹಾರಾಜರ ಹಾಗೂ ಸಂತ ಸರ್ವಜ್ಞರ  ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರವನ್ನ ಪರಕಿಯರ ಆಡಳಿತದಿಂದ ಮುಕ್ತಿಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದ್ದಾಗಿದೆ.  ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಸೀಮಿತಗೊಳ್ಳದೆ ರಾಷ್ಟ್ರ ನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿ ತ್ಯಾಗ ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ, ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ ಸರ್ವಜ್ಞರು, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿ ಶ್ರೇಷ್ಠವಚನಕಾರರು ಎನಿಸಿಕೊಂಡರು ಎಂದು ತಿಳಿಸಿದರು.

ಉಪ ತಹಶಿಲ್ದಾರ್ ಮೋಹನ್ ಮಾತನಾಡಿ, ಇತಿಹಾಸದಲ್ಲಿ ಭಾರತದ ಸಂಸ್ಕೃತಿ ರಕ್ಷಣೆಯ ಮಹಾನ್ ಕಾರ್ಯಗಳಲ್ಲಿ ಹೆಸರು ಮಾಡಿದಂತಹ ಧೀಮಂತ ವ್ಯಕಿಗಳಲ್ಲಿ ಶಿವಾಜಿ ಮುಖ್ಯವಾದವರು ತಮ್ಮ ಆಡಳಿತದಲ್ಲಿ ಸಮಾಜದಲ್ಲಿದ್ದ ದುರ್ಬಲರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದ್ದರು ಸ್ವರಾಜ್ಯದ ರಕ್ಷಣೆಗಾಗಿ ಎಷ್ಟೋ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ.ಅಂತಹ ಮಹಾನ್ ಸಾಧಕರಲ್ಲಿ ಛತ್ರಪತಿ ಶಿವಾಜಿ ಮಹರಾಜರು ಶ್ರೇಷ್ಟವಾದವರು ಅದ್ದರಿಂದ ಸಂತ ಸರ್ವಜ್ಞ ಹಾಗೂ ಶಿವಾಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನ ತಿಳಿಸಿ ಅವರಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲೇಶ್, ಶಿರಸ್ತೇದಾರಗಳಾದ ಅಶೋಕ್, ಮಂಜುನಾಥ್, ಹಾಗೂ ಕಚೇರಿಯ ಸಿಬ್ಬಂದಿಗಳು  ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net