

ಭಾಲ್ಕಿ: ವಿದ್ಯಾರ್ಥಿಗಳು, ಯುಕವರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿಯಬೇಕು. ಅಂದಾಗ ಮಾತ್ರ ಇವರೆಲ್ಲ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಪಟ್ಟಣದ ಪುಭವನದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶಾಭಿಮಾನಿಗಳಾಗಿ ಬದುಕಬೇಕು. ದೇಶದ ಪರವಾಗಿ ಜೀವ ತ್ಯಾಗ ಮಾಡಲು ತಯಾರಿರಬೇಕು. ತಾಯಿಯ ಮಾರ್ಗದರ್ಶನದಿಂದಲೇ ಶಿವಾಜಿ ಮಹಾರಾಜರು ಉತ್ತಮ ಮಟ್ಟಕ್ಕೇರಲು ಸಾಧ್ಯವಾಯಿತು. ಎಲ್ಲಾ ತಾಯಂದರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಾಜಿ ಮಹಾರಾಜರ ಇತಿಹಾಸ ಅರಿತು, ಅವರಂತ ತತ್ವಾದರ್ಶಗಳಂತೆ ಬಾಳಿ ದೇಶಪ್ರೇಮ ಮೆರೆಯಬೇಕು ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಇಒ ಸೂರ್ಯಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ನಾಗೇಶ್ವರಿ ಜಗತಾಪ ವಿಶೇಷ ಉಪನ್ಯಾಸ ಮಂಡಿಸಿದರು.
ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ ಜಿ., ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಜಬನೂರ, ಕೃಷಿ ಅಧಿಕಾರಿ ಪಿ.ಮಲ್ಲಿಕಾರ್ಜುನ, ಸಿಪಿಐ ಅಮರೇಶ.ಬಿ ಇದ್ದರು.
ಶಿವಾಜಿ ಪ್ರೌಢಶಾಲೆ, ಸತ್ಯನಿಕೇತನ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಭಾಲ್ಕಿ, ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಚನ್ನಬಸಪ್ಪ ಹಳ್ಳದ ವಂದಿಸಿದರು.