

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಪರಶುರಾಮ ಕೋಟೂರು ರಾಷ್ಟ್ರಮಟ್ಟದ ಕಬಡ್ಡಿಗೆ ಆಯ್ಕೆಯಾಗಿದ್ದಾನೆ. ತಮಿಳುನಾಡಿನ ಎಸ್.ಆರ್.ಎಂ. ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಷ್ಟçಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಽಸಲಿದ್ದಾನೆ. ವಿದ್ಯಾರ್ಥಿಯನ್ನು ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಆಡಳಿತ ಮಂಡಳಿ ಪದಾಽಕಾರಿಗಳು, ಪ್ರಾಚಾರ್ಯ, ದೈಹಿಕ ನಿರ್ದೇಶಕರು ಅಭಿನಂದಿಸಿದ್ದಾರೆ.