ಶಿವಶರಣ ಶ್ರೀ ನುಲಿಯ ಚಂದಯ್ಯ ಪ್ರಾಮಾಣಿಕ ದುಡಿಮೆ ದಾಸೋಹವನ್ನು ಪ್ರತಿಪಾದಿಸಿದ್ದಾರೆ

CTD 31 NEWS NULIYA CHANDAIH--03
Published on

ಚಿತ್ರದುರ್ಗ: ಲಿಂಗಪೂಜೆ ಹಾಗೂ ಕಾಯಕ ಶರಣ ತತ್ವದ ಮೂಲಗಳು. ಆದರೆ ಇವರೆಡರಲ್ಲಿ ಲಿಂಗ ಪೂಜೆಗಿಂತ ಕಾಯಕ ಶ್ರೇಷ್ಠವೆಂಬುದನ್ನು ಶಿವ ಶರಣ ಶ್ರೀನುಲಿಯ ಚಂದಯ್ಯ ಅವರು ಜಗತ್ತಿಗೆ ಸಾರಿದ್ದಾರೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ಗುರುವಾರ ನಗರದ ತರಾಸು ರಂಗ ಮಂದಿರಲ್ಲಿ ಆಯೋಜಿಸಿದ್ದ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಅವರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ಮಾಡುವ ದಾಸೋಹ ನಮ್ಮ ಪ್ರಾಮಾಣಿಕ ದುಡಿಮೆಯದ್ದಾಗಿರಬೇಕೆಂದು ಚಂದಯ್ಯನವರು ಪ್ರತಿ ಪಾದಿಸಿದ್ದಾರೆಂದು ಹೇಳಿ ದ ಶಾಸಕರು,ಕೊರಚ ಸಮಾಜದ ಬಹು ದಿನಗಳ ಬೇಡಿಕೆಯಂತೆ ಈ ಹಿಂದೆ ನಗರದ ಮಾಳಪನಹಟ್ಟಿ ಬಳಿ ಗುರುತಿಸಿರುವ 2 ಎಕರೆ ಜ ಮೀನನ್ನು ಶೀಘ್ರ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಕಾರ‌್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಮಾತನಾಡಿ,ಶ್ರೀನುಲಿಯ ಚಂದಯ್ಯ ಅವರು ಕಾಯ ಕ ನಿಷ್ಠೆಗೆ ಹೆಸರಾದವರು. ಕೊರಚ ಸಮಾಜದವರು ಕಷ್ಟಪಟ್ಟು ದುಡಿಯುತ್ತಾರೆ. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾಜ ಪ್ರಗತಿ ಸಾಧಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮಿಜಿ ಅವರು ಆರ್ಶೀವಚನ ನೀಡಿ,ಕೊರಚ,ಕೊರಮ,ಭಜಂತ್ರಿ ಮತ್ತಿ ತ ರ ಸಮಾಜಗಳನ್ನು ಗುರುತಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ನುಲಿಯ ಚಂದಯ್ಯನವರು ತೋರಿದ ಹಾದಿಯಲ್ಲಿ ಎಲ್ಲರೂ ನಡೆ ಯಬೇಕು. ಪೂಜೆಗೆ ಲಕ್ಷ್ಮಿಒಲಿಯುವುದಿಲ್ಲ. ಕಾಯಕ ಮಾಡಿದರೆ ಲಕ್ಷ್ಮಿ ಮನೆ ಬಾಗಿಲಿಗೆ ಬರುತ್ತಾಳೆ.
ದಾಸೋಹಕ್ಕಿಂತ ಮಿಗಿಲಾದ ದೇವರ ಪೂಜೆ ಇಲ್ಲ.ನೊಂದವರ ಕಣ್ಣೀರು ಒರೆಸಿ,ಆಸರೆ ನೀಡಬೇಕು. ಕರುಣೆ,ದಾನ,ಧರ್ಮಗಳಲ್ಲಿ ದೇ ವರಿದ್ದಾನೆ ಎಂದರು. ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಆರ್.ನಾಗಪ್ಪ ಉಪನ್ಯಾಸ ನೀಡಿ,12ನೇ ಶತ ಮಾನದಲ್ಲಿ ವಿಜಯಪುರ ಜಿಲ್ಲೆ ಶಿವಣಗಿಯಲ್ಲಿ ನುಲಿಯ ಚಂದಯ್ಯನವರು ಜನಿಸಿದರು.
ಶಿವಶರಣರ ಸಾಂಗತ್ಯದಲ್ಲಿದ್ದ ಚಂದಯ್ಯ ನವರು ಬಸವಕಲ್ಯಾಣದ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಸವಕಲ್ಯಾಣದ ತ್ರಿ ಪುರಾಂತಕ ಕೆರೆ ಗದ್ದುಗೆ ಬಳಿ,ಖಡ್ಗ ಹಿಡಿದಿರುವ ಕಲ್ಲಿನ ಕೆತ್ತನೆಯ ಅವರ ಚಿತ್ರವಿದೆ. ನಿತ್ಯದ ಕಾಯಕದಿಂದ ಚಂದಯ್ಯ ದಾಸೋಹ ನಡೆ ಸುತ್ತಿದ್ದರು.
ಈವರೆಗೂ ಅವರ 48 ವಚನಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕ್ರಾಂತಿ ನಂತರ ಉಳವಿಗೆ ಆಗಮಿಸಿದ ಚಂದಯ್ಯ ಅಲ್ಲಿಂದ ಹೊ ಳ ಲ್ಕೆರೆ ತಾಲೂಕು ನುಲೇನೂರಿಗೆ ಆಗಮಿಸಿದರು. ಇಂದಿಗೂ ನುಲೇನೂರಿನಲ್ಲಿ ಚಂದಯ್ಯ ಅವರಿಗೆ ಸಂಬಂಧಿಸಿದ ಮಂಟಪಗಳನ್ನು ಕಾಣ ಬಹುದಾಗಿದೆ ಎಂದರು.
ಸದ್ಗುರು ಶ್ರೀ ಓಂಕಾರ ಹುಚ್ಚಲಿಂಗ ಸ್ವಾಮೀಜಿ,ಈಚಲನಾಗೇನಹಳ್ಳಿ ಶ್ರೀಗೋವಿಂದ ಸ್ವಾಮೀಜಿ,ಎಎಸ್‌ಪಿ ಕುಮಾರಸ್ವಾಮಿ,ಅಖಿಲ ಕರ್ನಾಟಕ ಕೊರಚ ಮಹಾಸಂಘದ ಅಧ್ಯಕ್ಷ ಎಚ್.ಎನ್.ರಾಮಚಂದ್ರಪ್ಪ,ಕೊರಚ ಸಮಾಜದ ಜಿಲ್ಲಾಧ್ಯಕ್ಷ ವೈ.ಕುಮಾರ್,ಪ್ರಧಾನಕಾರ‌್ಯ ದರ್ಶಿಎನ್.ಧನಂಜಯ,ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಕೃಷ್ಣಪ್ಪ,ಪ್ರಧಾನ ಕಾರ‌್ಯದರ್ಶಿ ದ್ವಾರಕನಾಥ್ ಮತ್ತಿತರರು ಇದ್ದರು.
ಭವ್ಯಮೆರವಣಿಗೆ
ನಗರದ ನೀಲಕಂಠೇಶ್ವರ ದೇವಾಲಯದಿಂದ ರಂಗಮಂದಿರದವರೆಗೆ ಶ್ರೀನುಲಿಯ ಚಂದಯ್ಯ ಅವರ ಭಾವಚಿತ್ರದ ಭವ್ಯ ಮೆರವಣಿ ಗೆ ನಡೆಯಿತು. ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಪೂರ್ಣಕುಂಭ ಹೊ ತ್ತ ಮಹಿಳೆಯರು ಹಾಗೂ ಕಲಾ ತಂಡಗಳು ಭಾಗವಹಿಸಿದ್ದವು. ಗಾಂಧಿ ವೃತ್ತ,ಎಸ್‌ಬಿಐ ವೃತ್ತಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮೂಲಕ ಮೆರವಣಿಗೆ ರಂಗಮಂದಿರ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net