ಶಿವಲಿಂಗಾನಂದ ಸ್ವಾಮೀಜಿಗೆ ಬಸವ ಸಿರಿ ಪ್ರಶಸ್ತಿ ವಿತರಣೆ ಜ.1ಕ್ಕೆ

IMG-20221230-WA0027.jpg
Published on

ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಶಿವಯೋಗಿ ಮಂದಿರದಲ್ಲಿ ಜ.1ರಂದು ಸಂಜೆ 6.30ಕ್ಕೆ ‘ಕನ್ನಡದ ಹಬ್ಬ’ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಚಿತ್ರದುರ್ಗ ಕಬೀರಾನಂದ ಆಶ್ರಮದ ಸದ್ಗುರು ಶಿವಲಿಂಗಾನಂದ ಸ್ವಾಮೀಜಿಗೆ ‘ಬಸವ ಸಿರಿ’ ಪ್ರಶಸ್ತಿ .

ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಸಮಾರಂಭ ಉದ್ಘಾಟಿಸಲಿದ್ದು, ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಿದ್ದಾರೆ. ಅಲ್ಲದೇ, ವಿವಿಧ ಕ್ಷೇತ್ರಗಳಲ್ಲಿನ 18 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಾ.ರಮೇಶ ಪೂಜಾರ್, ಡಿವೈಎಸ್ಪಿ ನಾಗೇಶ ಐತಾಳ್, ಕನ್ನಡಪರ ಹೋರಾಟಗಾರ ಸಣ್ಣೀರಪ್ಪ, ಉದ್ಯಮಿ ಉಮೇಶ್, ಶ್ರಿ ಶಿವಮೂರ್ತಿ ಸ್ವಾಮಿ, ಚಿತ್ರಕಲಾ ಕ್ಷೇತ್ರದ ನಾ.ರೇವನ್, ಎಲ್ಲಪ್ಪ ಕಂಬಾರ್, ಸಾಹಿತ್ಯ ಕ್ಷೇತ್ರದ ಮಲ್ಲಿಕಾರ್ಜುನ ಕಡಕೋಳ, ವಕೀಲ ಪಿ.ಶ್ರೀಧರ್, ಕಲಾವಿದ ಆರ್.ಆರ್.ತಿಪ್ಪೇಸ್ವಾಮಿ, ಪತ್ರಿಕಾ ವಿತರಕ ಆರ್.ಸುಧಾಕರ್, ಛಾಯಾಗ್ರಾಹಕರಾದ ಸತೀಶ ಬಡಿಗೇರ, ಜಿ.ಎನ್.ರಾಮು, ರಾಷ್ಟ್ರೀಯ ಕರಾಟೆ ತರಬೇತಿದಾರ ಕೆ.ಪಿ.ಜೋಸ್, ರಂಗಭೂಮಿ ಕಲಾವಿದೆ ವಿಜಯಲಕ್ಷ್ಮಿ, ಪತ್ರಕರ್ತರಾದ ಒ.ಎನ್.ಸಿದ್ದಯ್ಯ ಒಡೆಯರ್, ಎ.ಆರ್.ಪುನೀತ್, ಯೋಗ ಶಿಕ್ಷಕ ಎಂ.ಶಿವಪ್ಪ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು. ಸಮಾರಂಭದಲ್ಲಿ ಜೀ ಕನ್ನಡದ ಡ್ಯಾನ್ಸರ್ ನವೀನ್ ಮತ್ತು ಆಶೀತ್ ತಂಡದಿಂದ ನೃತ್ಯ ಹಾಗೂ ಜೀವಿತ್ ಜೂನಿಯರ್ ವಿಷ್ಣುವರ್ಧನ್ ತಂಡದಿಂದ ರಸಮಂಜರಿ ಏರ್ಪಡಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಕಾರ್ಯದರ್ಶಿ ಈಶ್ವರ್, ಸಂಘಟನಾ ಕಾರ್ಯದರ್ಶಿ ಕೆ.ಜಿ.ಬಸವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಶಾಂತಮ್ಮ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net