ಶಿವಲಿಂಗಾನಂದ ಶ್ರೀಗೆ ತಲುಪಿದ ಆಹ್ವಾನ ಪತ್ರಿಕೆ

Shivalingananda
Published on

ಚಿತ್ರದುರ್ಗ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಆಗುತ್ತಿದ್ದು, ಅದರ ಅಂಗವಾಗಿ ಶ್ರೀರಾಮಮಂದಿರ ತೀರ್ಥಕ್ಷೇತ್ರ ಸೇವಾ ಟ್ರಸ್ಟ್, ಜಿಲ್ಲಾ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ತಂಡದ ಪದಾಧಿಕಾರಿಗಳಿಂದ ಬುಧವಾರ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರಿಗೆ ಅಧಿಕೃತವಾಗಿ ಆಹ್ವಾನ ಪತ್ರಿಕೆ ತಲುಪಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಮುಖ್ಯಸ್ಥ ನಾಗೇಶ್, ಮಂತ್ರಾಕ್ಷತೆ ಕಾರ್ಯಕ್ರಮ ಜಿಲ್ಲಾ ತಂಡದ ಪ್ರಮುಖರಾದ ಜಿ.ಎಸ್. ಅನಿತ್‌ಕುಮಾರ್, ಎ.ಮುರಳಿ, ಎಂ.ಸಿ.ರಘುಚಂದನ್, ಶ್ರೀನಾಥ್, ರುದ್ರೇಶ್, ಡಾ.ಲೇಪಾಕ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net