ಶಿವರಾತ್ರಿ ಮರುದಿನ ಶಿವಲಿಂಗ ಸ್ಪರ್ಷಿಸಲಿದೆ ಸೂರ್ಯಕಿರಣ

26 02
Published on

ತುಮಕೂರು:ಸಂಕ್ರಾತಿಯಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ರಶ್ಮಿಗಳು ಶಿವಲಿಂಗ ಸ್ಪರ್ಶಿಸುವಂತೆ ತುಮಕೂರು ತಾಲೂಕು ಕೋರ ಹೋಬಳಿ ಹಿರೇತೊಟ್ಟುಕೆರೆ ಸೋಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮರುದಿನ ಸೂಯೋರ್ದಯದ

ವೇಳೆ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುತ್ತವೆ.

ಹಿಂದಿನಿಂದಲೂ ಇದು ಭಕ್ತರಲ್ಲಿ ಚಮತ್ಕಾರ ಎನಿಸಿದೆ. ದೇವಾಲಯಕ್ಕೆ 300 ವರ್ಷ ಇತಿಹಾಸವಿದ್ದು ನೊಳಂಬ ಅರಸರ ಕಾಲದಲ್ಲಿ ಸೋಮೇಶ್ವರ ದೇವಾಲಯ ನಿಮಾರ್ಣವಾಗಿರುವ ಬಗ್ಗೆ ಕೃತಿಗಳಲ್ಲಿ ಉಲ್ಲೇಖ ಇದೆ. ಸೋಮೇಶ್ವರ ದೇವರ ಲಿಂಗುವಿನ ಮೇಲೆ ಸೂರ್ಯಕಿರಣಗಳು ಬೀಳುವ ದೃಶ್ಯ ಕಣ್ಣುಂಬಿಕೊಳ್ಳಲು ರಾಜ್ಯದ

ವಿವಿಧ ಭಾಗಗಳ ಭಕ್ತರು ಆಗಮಿಸುವರು.

ನೊಳಂಬ ಅರಸು ಮನೆತನಕ್ಕೆ ಸೇರುವ ಮಹಾನಾಡ ಪ್ರಭುಗಳು ಕೋರ ಗ್ರಾಮ ನಿರ್ಮಿಸಿ ರಾಜಧಾನಿಯನ್ನಾಗಿ ಮಾಡಿಕೊಂಡು ಅಳ್ವಿಕೆ ನಡೆಸುತ್ತಿದ್ದರು. ಈ ಮನೆತನಕ್ಕೆ ಸೇರಿದ ಹಿರೇಗೌಡ ಎಂಬ ಅರಸ ಹಿರೇತೊಟ್ಟುಕೆರೆ ಗ್ರಾಮ ನಿರ್ಮಿಸಿ, ಕೆರೆ ಕಟ್ಟಿಸಿ ಸೋಮೇಶ್ವರ ದೇವಾಲಯ ನಿರ್ಮಿಸಿದ ಎಂಬ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. ಶಿವನ ವಾಹನ ನಂದಿ ನೊಳಂಬ ಅರಸರ ರಾಜ್ಯ ಲಾಂಛನವಾಗಿತ್ತು. ಹಾಗಾಗಿ, ಈ ದೇವಾಲಯದಲ್ಲಿಯೂ ಬೃಹತ್​ ಗಾತ್ರದ ನಂದಿ ವಿಗ್ರಹ ಭಕ್ತರನ್ನು ಆಕರ್ಷಿಸುತ್ತಿದೆ. ದೇವಾಲಯದ ಮುಂಭಾಗ ದೊಡ್ಡ ಕಲ್ಲಿನ ಮಂಟಪವಿದ್ದು,ಈ ಕಲ್ಲಿನ ಮಂಟಪಕ್ಕೆ ತಳಪಾಯ ಇಲ್ಲ. ಎಂತಹ ಗಾಳಿ ಮಳೆಗೂ ಬಗ್ಗದೆದೃಢವಾಗಿ ನಿಂತಿದೆ. ಇಲ್ಲಿ ಅರಸು ಮನೆತನದವರ ವಿಜಯದಶಮಿ ದಿನದಂದು ಅಂಬು ಹಾಯುತ್ತಿದ್ದರು ಎಂಬ ಉಲ್ಲೇಖವಿದೆ. ಇಂದಿಗೂ ಅಂಬು ಹಾಯುವ ಪದ್ಧತಿ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net