ಶಿವರಾಜ್ ಕುಮಾರ್ ಗುಣಮುಖರಾಗಲೆಂದು ವಿಶೇಷಪೂಜೆ

IMG-20241223-WA0027
Published on

ಚಾಮರಾಜನಗರ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಶಿವಸೈನ್ಯ ಟೀಮ್ ವತಿಯಿಂದ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಶಿವರಾಜ್ ಕುಮಾರ್ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷಪೂಜೆ ಸಲ್ಲಿಸಲಾಯಿತು.

ಈ ವೇಳೆ ಶಿವಸ್ಯನ್ಯ ಟೀಮ್ ಕಾರ್ತಿಕ್ ಮಾತನಾಡಿ, ಶ್ರೀ ಚಾಮರಾಜೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ, ನಟ ಶಿವಣ್ಣ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದೇವೆ. ನೆಚ್ಚಿನ ಗುರುಗಳಾದ ಶಿವರಾಜಕುಮಾರ್ ಚಿಕಿತ್ಸೆ ಯಶಸ್ವಿಯಾಗಿ ಗುಣಮುಖರಾಗಿ ಬರಲೀ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಶಿವಸೈನ್ಯ ಟೀಮ್ ಅಧ್ಯಕ್ಷ ಟೀ‌ ಕ್ಯಾಂಟೀನ್ ಮಂಜಣ್ಣ, ಮಣಿಪವರ್, ಟಗರ್ ನಾಗೇಶ್, ಕಾರ್ತಿಕ್, ನಟ, ಮಾಕಾಟ, ಮಾದೇಶ್, ರವಿಬಾಂಡ್, ರಮೇಶ್, ಕುಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net