ಶಿವಯೋಗಿ ಸಿದ್ದರಾಮೇಶ್ವರ ಬಿಡುಗಡೆ 24ರಂದು

siddarameshwar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಓಂಕಾರ್ ಮೂವೀಸ್ ನಿರ್ವಿುಸಿರುವ ಭಕ್ತಿ ಪ್ರಧಾನವಾದ ‘ಶಿವಯೋಗಿ ಸಿದ್ದರಾಮೇಶ್ವರ’ ಚಲನಚಿತ್ರ ಜ. 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಪುರುಷೋತ್ತಮ ಓಂಕಾರ ಸ್ವಾಮಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಬಾಲ್ಯದಿಂದ ಅಂತ್ಯದವರೆಗೆ ಶಿವಯೋಗಿ ಸಿದ್ದರಾಮೇಶ್ವರರ ಇಡೀ ಜೀವನ ವೃತ್ತಾಂತ ಮೂಡಿ ಬಂದಿದೆ. ಅಂದಿನ ತಾಂತ್ರಿಕತೆಯೊಂದಿಗೆ ಪೌರಾಣಿಕ ಕಥೆಯನ್ನು ಸಿದ್ಧಪಡಿಸಲಾಗಿದೆ. ಸಿದ್ದರಾಮೇಶ್ವರರ ಪವಾಡಗಳೊಂದಿಗೆ ಮನರಂಜನೆಯನ್ನು ಹೊಂದಿದೆ. ಚಿತ್ರದಲ್ಲಿ 2 ಹಾಡುಗಳು ಹಾಗೂ ನಾಲ್ಕು ವಚನಗಳಿವೆ ಎಂದರು.

ಎನ್.ಎಸ್. ರಾಜಕುಮಾರ ನಿರ್ವಪಕರಾಗಿದ್ದಾರೆ. ಜೆ.ಕೆ. ಸುನಿಲಕುಮಾರ ಸಹ ನಿರ್ವಪಕರಾಗಿ ಕೈ ಜೋಡಿಸಿದ್ದಾರೆ. ರಾಜಭಾಸ್ಕರ್ ಸಂಗೀತ ಸಂಯೋಜನೆ, ಗೌರಿ ವೆಂಕಟೇಶ ಛಾಯಾಗ್ರಹಣ, ಆರ್. ಅನಿಲಕುಮಾರ ಗ್ರಾಫಿಕ್ಸ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಹೇಳಿದರು.

ನಾಯಕ ನಟ ರಾಮಣ ಕತ್ತಿ ಮಾತನಾಡಿ, ನನ್ನಂಥ ಸಣ್ಣ ಕಲಾವಿದನಿಗೆ ಇಂಥದೊಂದು ಪೌರಾಣಿಕ ಪಾತ್ರ ಸಿಕ್ಕಿದ್ದು ಪುಣ್ಯವೆಂದು ಭಾವಿಸುತ್ತೇನೆ. ನಾಡಿನ ಜನತೆ ಪ್ರೋತ್ಸಾಹಿಸಬೇಕೆಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಹ ನಿರ್ವಪಕ ಜೆ.ಕೆ. ಸುನಿಲಕುಮಾರ, ಪ್ರಮೀಳಾ ಸುಬ್ರಹ್ಮಣ್ಯ, ಅನ್ನಪೂರ್ಣ, ಡಾ. ಪ್ರಭು ಗಂಜಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net