

ಬಾಗಲಕೋಟೆ: ಚರಂತಿಮಠವನ್ನು ನಾಡಿನ ಮಠವನ್ನಾಗಿಸಿ, ಶಿವಯೋಗದ ಮೂಲಕ ಬಾಗಲಕೋಟೆಗೆ ಬೆಳಕಾದ ಚೇತನ ಪ್ರಭುದೇವರ ಕಾರ್ಯ ಮಾದರಿಯಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷÀ ಡಾ.ವೀರಣ್ಣ ಚರಂತಿಮಠ ಹೇಳಿದರು.
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ವಿದ್ಯಾಗಿರಿಯ ಬಿವಿವಿಎಸ್ ಕಲಾ, ವಿಜ್ಞಾನ, ಹಾಗೂ ವಾಣಿಜ್ಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಿಂದ ಶುಕ್ರವಾರ ಇಂಜನಿಯರಿAಗ್ ಕಾಲೇಜಿನ ನೂತನ ಸಭಾಭವನದಲ್ಲಿ ಚರಂತಿಮಠದ ಪೂಜ್ಯರು, ಬಿವಿವಿ ಸಂಘದ ಅಧ್ಯಕ್ಷರಾದ ಪ್ರಭು ಸ್ವಾಮಿಗಳಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ ಪ್ರಯುಕ್ತ ಗೌರವಾಭಿನಂಧನೆÀ ಹಾಗೂ ೨೦೨೫-೨೬ ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಓಣಿಯ ಮಠದಂತೆ ಇದ್ದ ಚರಂತಿಮಠವನ್ನು ಅನೇಕ ಧಾರ್ಮಿಕ ಆಚರಣೆಯಿಂದ ಶಿವಯೋಗದ ಪ್ರವವಚನಗಳ ಮೂಲಕ ಧಾರ್ಮಿಕ ವಾತವಾರಣವನ್ನು ನಿರ್ಮಾಣ ಮಾಡಿ, ನಾಡಿನ ಮಠವನ್ನಾಗಿ ಬೆಳಗಿಸಿದ ಕೀರ್ತಿ ಪೂಜ್ಯ ಪ್ರಭುಸ್ವಾಮೀಜಿಗೆ ಸಲ್ಲುತ್ತದೆ, ಬಾಗಲಕೋಟೆ ಹಾಗೂ ನಿಡಸೋಸಿಯ ಮಠದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಬೆಳಕಿಗೆ ತಂದವರು. ಜನರಲ್ಲಿರುವ ಅನೇಕ ಮೂಡನಂಬಿಕೆಗಳ ಪಿಡುಗುಗಳನ್ನು ತೊಡೆದು ಹಾಕುವ ಮೂಲಕ ಅನೇಕ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿ, ನೀರಾವರಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ರೈತರಿಗೆ ದಾರಿ ದೀಪವಾಗಿದ್ದಾರೆ, ಈ ಸಾಧನೆ ಗುರುತಿಸಿ ಅವರಿಗೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ್ದು ಹೆಮ್ಮೆಯ ವಿಚಾರವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಇಳಕಲ್ಲ ಚಿತ್ತರಗಿ ಸಂಸ್ಥಾನಮಠದ ಪೂಜ್ಯರು, ಬಿವಿವಿ ಸಂಘದ ಉಪಾಧ್ಯಕ್ಷರಾದ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಪ್ರಭುಸ್ವಾಮಿಗಳು ಬಾಗಲಕೋಟೆಗೆ ಬಂದು ೪೦ ವರ್ಷವಾಗಿದೆ, ಪೂಜ್ಯರು ಅತ್ಯಂತ ಕ್ರೀಯಾಶೀಲ, ಅಧ್ಯಯನಶೀಲರಾಗಿದ್ದಾರೆ. ಅವರ ಹೊಸ ಹೊಸ ಚಿಂತನೆಗಳಿAದ ನಿತ್ಯನೂತನರಾಗಿದ್ದಾರೆ. ಭಕ್ತರು ತನ್ನಂತೆಯೆAದು ನೋಡುವ ಮನೋಭಾವ, ಅವರ ವಿಚಾರಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ. ಅಂತರAಗದಲ್ಲಿ ಅಧ್ಯಾತ್ಮಿಕ ಜೀವಿಯಾದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತ್ರಿಕಾಲ ಲಿಂಗಪೂಜೆ ಮಾಡುವುದರಿಂದ ಅವರಿಗೆ ಅನುಭಾವ ಪ್ರಾಪ್ತಿಯಾಗಿದೆ. ಈ ಅನುಭಾವದಿಂದ ಭಕ್ತರು ಮತ್ತು ಶಿಷ್ಯರು ನಡುವೆ ಅಂತರ ಇರುವುದಿಲ್ಲ. ಅಂತರAಗದಲ್ಲಿ ಸಾಮರಸ್ಯ ಬಂದರೆ ಬಹಿರಂಗದಲ್ಲಿಯೂ ಸಾಮರಸ್ಯ ಬರುತ್ತದೆ ಎಂದು ನಂಬಿರುವ ಪ್ರಭು ಮಹಾಸ್ವಾಮಿಗಳ ಈ ಸರಳ ಸ್ವಭಾವವೇ ಭಕ್ತ ಜನರ ಪ್ರೀತಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಗೌರವಾಭಿನಂಧನೆ ಸ್ವೀಕರಿಸಿದ ಚರಂತಿಮಠದ ಪ್ರಭುಸ್ವಾಮಿಗಳು ಮಾತನಾಡಿ, ಜಗತ್ತನ್ನೆ ಸೆಳೆಯುವ ಶಕ್ತಿ ಭಾರತೀಯ ಸಂಸ್ಕೃತಿಗೆ ಇದೆ. ಅದಕ್ಕೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಇವುಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತವೆ. ಎಷ್ಟೆ ಶಿಕ್ಷಣ ಪಡೆದರೂ ಸಹಿತ ಮಾನವೀಯತೆ ಎಂಬ ಸಂಸ್ಕೃತಿಯಲ್ಲಿ ಬದುಕಿದಾಗ ಮಾತ್ರ ಮನುಷ್ಯ ಮನುಷ್ಯಾಗಿರುವ ವ್ಯವಸ್ಥೆ ಬರುತ್ತದೆ. ಇಲ್ಲದೆ ಹೋದರೆ ಬರಿ ಯಾಂತ್ರಿಕವಾಗಿ ಬದುಕುವ ವ್ಯವಸ್ಥೆ ಬರುತ್ತದೆ. ಆ ನಿಟ್ಟಿನಲ್ಲಿ ಬಿವಿವಿ ಸಂಘವು ಶತಮಾನದಿಂದಲೂ ಮಾನವೀಯ ನೆಲಗಟ್ಟಿನಲ್ಲಿ ಶಿಕ್ಷಣ ದಾಸೋಹವನ್ನು ಮಾಡುತ್ತಾ ಬಂದಿರುವುದು ದೇಶಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ೬ ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.