ಶಿವಮೊಗ್ಗದಲ್ಲಿ ರೋಜಾಷಣ್ಮುಗಂ ಗುರುನಮನ

smarane
ಶಬರೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್.ಶಂಕರ್, ಮಣಿಕಂಠ, ಪ್ರತಿಮಾ, ವಾಣಿ ರಾಜು, ರಾಜೇಂದ್ರನ್, ಎಸ್.ಉದಯಕುಮಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಜ.23ರ ಸಂಜೆ 4ಕ್ಕೆ ಅಯ್ಯಪ್ಪ ಸ್ವಾಮಿ ಪರಮಭಕ್ತ ರೋಜಾ ಷಣ್ಮುಗಂ ಗುರುನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರೋಜಾ ಷಣ್ಮುಗಂ ಟ್ರಸ್ಟ್ ಅಧ್ಯಕ್ಷ ಶಬರೀಶ್ ತಿಳಿಸಿದರು.

ಗುರುನಮನದ ಅಂಗವಾಗಿ ಹರಿದ್ವಾರದ ಪವಿತ್ರ ಗಂಗಾಜಲವನ್ನು ವಿತರಿಸಲಾಗುವುದು. ಮುತ್ತು ಮಾರಿಯಮ್ಮನ್ ಪಂಬೆ ಇಸೈಕುರು ಅವರಿಂದ ಅಯ್ಯಪ್ಪನ ಮಹಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದಕ್ಕೂ ಮುನ್ನ ಮಹಿಳೆಯರು ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭದ್ರಾವತಿಯ ಭದ್ರಗಿರಿ ಮುರುಗೇಶ್ ಸ್ವಾಮೀಜಿ, ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಶ್ರೀ ಶಿವಯೋಗಿ ಮಹಾಲಿಂಗ ಸ್ವಾಮೀಜಿ, ಚೈನ್ನೈನ ಗುರುಕೃಪ ರಾಜೀವ ಗುರುಸ್ವಾಮಿ, ಪಂಡಿತರಾದ ಶತ್ರುಘ್ನ ಶಾಸ್ತ್ರಿ ವೈದ್ಯನಾಥ್ ಧಾಮ್, ಪ್ರಹ್ಲಾದ್ ಸಿಂಗ್ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯನಾಯ್ಕ, ಡಿ.ಎಸ್.ಅರುಣ್, ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಹಾಪ್‌ಕಾಮ್ಸ್ ನಿರ್ದೇಶಕ ವಿಜಯ್‌ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಕರುಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಎನ್.ಕುಮಾರ್, ಸೇವಾ ಕಾರ್ಯಕರ್ತರಾದ ಎಸ್.ಶಂಕರ್ ಎಸ್, ಎಚ್.ರಾಜಕುಮಾರ್, ಎಸ್.ಉದಯಕುಮಾರ್, ಮಣಿಕಂಠ, ಪ್ರತಿಮಾ, ಸಿಂಧೂ, ವಾಣಿ ರಾಜು, ಎಚ್.ಜಿ.ಜ್ಯೋತಿ, ರಾಜೇಂದ್ರನ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net