ಶಿವಪ್ರಕಾಶ್ ಮುಖ್ಯ ಇಂಜಿನಿಯರ್

K.M.Shivaprakash
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನಾ ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್ ಹುದ್ದೆಯ ಸ್ವತಂತ್ರ ಪ್ರಭಾರವನ್ನು ಕೆ.ಎಂ.ಶಿವಪ್ರಕಾಶ್ ಶುಕ್ರವಾರ ವಲಯದ ಕಚೇರಿಯಲ್ಲಿ ವಹಿಸಿಕೊಂಡರು.

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾ ವೃತ್ತದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ, ಯೋಜನೆಗೆ ಮುಖ್ಯ ಇಂಜಿನಿಯರ್ ಆಗಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ಶಿವಪ್ರಕಾಶ್ ಅವರಿಗೆ ಸರ್ಕಾರವು ಸ್ವತಂತ್ರ ಪ್ರಭಾರ ವಹಿಸಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net