ಶಿವಪೂಜೆಯಿಂದ ಆಧ್ಯಾತ್ಮ ಹೆಚ್ಚುತ್ತೆ

bkt-27-5
ನವನಗರದ ಸೆಕ್ಟರ್ ನಂಬರ್ ೧೫ ರಲ್ಲಿ ಬುಧವಾರ ಸಂಜೆ ಶಿವಲಿಂಗೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ನಡೆದ ಶಿವರಾತ್ರಿ ಸಂಭ್ರಮ ಮತ್ತು ಸಂಗೀತ ಕಾರ್ಯಕ್ರಮ ಟೀಕಿನಮಠದ ಮಲ್ಲಿಕಾರ್ಜುನ ದೇವರು ಉದ್ಘಾಟಿಸಿದರು.
Published on

ಬಾಗಲಕೋಟೆ: ನಮ್ಮ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿ ಆಚರಣೆ ಪ್ರಮುಖವಾಗಿದ್ದು. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದೆ ಎಂದು ಟೀಕಿನಮಠದ ಮಲ್ಲಿಕಾರ್ಜುನ ದೇವರು ಹೇಳಿದರು.

ನವನಗರದ ಸೆಕ್ಟರ್ ನಂಬರ್ ೧೫ ರಲ್ಲಿ ಬುಧವಾರ ಸಂಜೆ ಶಿವಲಿಂಗೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ನಡೆದ ಶಿವರಾತ್ರಿ ಸಂಭ್ರಮ ಮತ್ತು ಸಂಗೀತ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಶಿವರಾತ್ರಿಯಂದು ಶಿವದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಇದೆ. ಈಶ್ವರನ ಆರಾಧನೆ ಮಾಡುವ ಮೂಲಕ ಮನುಷ್ಯನ ಬದುಕು ಸುಂದರವಾಗಿ ಆಧ್ಯಾತ್ಮಕತೆ ಹೆಚ್ಚುತ್ತದೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆ ಶಿವಲಿಂಗದ ಮೇಲಿಟ್ಟು ಪೂಜಿಸಿದರೆ ಯಾಗ ಮಾಡಿದ ಫಲ ನಮಗೆ ದೊರೆಯುತ್ತದೆ ಎಂದರು.

ಚ0ದ್ರಶೇಖರ ಕಾಳನ್ನವರ ಉಪನ್ಯಾಸ ನೀಡಿದರು. ಶಿವಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ವಿ ಹೊಸಮಠ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಶಿವಬಸವ ಬಳ್ಳಾರಿ, ಮಾಜಿ ಸದಸ್ಯ ಯಲ್ಲಪ್ಪ ಬೆಂಡಗೇರಿ, ಪ್ರಶಾಂತ ಲೋಕಾಪುರ ಉಪಸ್ಥಿತರಿದ್ದರು. ಸ್ವಾತಿ ಹುಳಿಪಲ್ಲೆದ ಪ್ರಾರ್ಥಿಸಿದರು, ಎ.ಎಸ್.ಪ್ರಭುಗೋಳ ಸ್ವಾಗತಿಸಿದರು, ಪ್ರೊ.ಸಂಗಮೇಶ ಬ್ಯಾಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net