ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ

19BTP03
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಕೊಳ್ಳಿಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶಿವನ ಸ್ಮರಣೆ ನಡೆಯಿತು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧೆಡೆ ಶಿವರಾತ್ರಿ ಅಂಗವಾಗಿ ಶನಿವಾರ ಮತ್ತು ಭಾನುವಾರ ವಿಶೇಷ ಪೂಜೆ ನೆರವೇರಿತು.

ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ, ಬೆಟ್ಟದ ಮೇಲಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ, ಪವಾಡ ಬಸವೇಶ್ವರ, ವೀರಾಂಜನೇಯ ಸ್ವಾಮಿ, ಶಕ್ತಿದೇವತೆ ಶಾಂತವೀರಮ್ಮ, ಅತ್ತಿಗೋಡು ಗ್ರಾಮದ ಈಶ್ವರ ದೇವಸ್ಥಾನ, ಮಹದೇಶ್ವರ ಮಠ, ಚಪ್ಪರದಹಳ್ಳಿ ಗ್ರಾಮದ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ, ಲಕ್ಷ್ಮೀದೇವಿ ನಂಜುಂಡೇಶ್ವರ, ಚಾಮುಂಡೇಶ್ವರಿ, ಹಾರನಹಳ್ಳಿ ಗ್ರಾಮದ ಈಶ್ವರ ದೇವಸ್ಥಾನ, ದೊಡ್ಡಮ್ಮ, ಚಿಕ್ಕಮ್ಮ ತಾಯಿ, ಸೂಳೆಕೋಟೆ ಗ್ರಾಮದ ಆಂಜನೇಯ ಸ್ವಾಮಿ, ಗುಡಿಭದ್ರನಹೊಸಹಳ್ಳಿ ಗ್ರಾಮದ ಬಸವೇಶ್ವರ ಗುಡಿ ಸೇರಿದಂತೆ ಅಂಬಲಾರೆ, ಚಿಕ್ಕನೇರಳೆ, ಹಸುವಿನಕಾವಲು, ಗೊರಹಳ್ಳಿ, ಈಚೂರು, ದೊಡ್ಡಕಮರಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಗ್ರಾಮದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಪಾನಕ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net