ಶಿವನ ದರ್ಶನ ಪಡೆದ ಭಕ್ತರು

06-GPT-3
ಗುಂಡ್ಲುಪೇಟೆಪಟ್ಟಣದ ರಾಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ (ಶಿವಪಾರ್ವತಿಯರ) ಅರಿದ್ರಾದರ್ಶನದ ಅಲಂಕಾರ ಮಾಡಲಾಗಿದೆ
Published on

ಗುಂಡ್ಲುಪೇಟೆ: ಧನುರ್ಮಾಸದಲ್ಲಿ ಬರುವ ಅರಿದ್ರ ನಕ್ಷತ್ರದ ಅಂಗವಾಗಿ ಶುಕ್ರವಾರ ಭಕ್ತರು ನಸುಕಿನಲ್ಲಿ ಶಿವದೇವಾಲಯಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದರು.

ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಅರಿದ್ರ ನಕ್ಷತ್ರದ ಅಂಗವಾಗಿ ನಸುಕಿನಲ್ಲಿ ಶಿವನಿಗೆ ರುದ್ರಾಭಿಷೇಕ ಹಾಗೂ ವಸ್ತ್ರದಿಂದ ಶಿವಲಿಂಗಕ್ಕೆ (ಶಿವಪಾರ್ವತಿಯರ) ಅರಿದ್ರಾದರ್ಶನದ ಅಲಂಕಾರ ಮಾಡಿದ್ದರು. ಸೂರ್ಯೋದಯಕ್ಕೂ ಮೊದಲೇ ಮಹಿಳೆಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಿನ ಜಾವ ಅರಳಿಮರಕ್ಕೆ ನಮಸ್ಕಾರ ಮಾಡಿದರು. ಶಿವ ದೇವಾಲಯದಲ್ಲಿ ಶಿವಪಾರ್ವತಿಯರ ಮಹಾದರ್ಶನ ಪಡೆದು ಮಹಾಮಂಗಳಾರತಿ ತೀರ್ಥ ಪ್ರಸಾದ ಪಡೆದುಕೊಂಡರು.

ತಾಲೂಕಿನ ತೆರಕಣಾಂಬಿ ಗ್ರಾಮದ ಮೂಲಸ್ಥಾನೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸತೀಶ್ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net